ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕುl ಸುಶ್ಮಿತಾ ಬೆದ್ರುಪಣೆಯವರನ್ನು ಅರಂತೋಡು ಗೌಡ ಗ್ರಾಮ ಸಮಿತಿ, ಮಹಿಳಾ ಸಮಿತಿ ಮತ್ತು ತರುಣ ಸಮಿತಿ ವತಿಯಿಂದ ಅರಂತೋಡು ಗ್ರಾಮ ಪಂಚಾಯತ್ ನ ಅಮೃತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆ .16 ರಂದು ಸನ್ಮಾನಿಸಲಾಯಿತು.

ಗೌಡ ಗ್ರಾಮ ಸಮಿತಿಯ ಅಧ್ಯಕ್ಷರು ಮತ್ತು ತಾಲೂಕು ಸಮಿತಿ ಪ್ರದಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕಾ ವಾಗಿ ಮಾತುಗಳನ್ನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ವಿಶ್ರಾಂತ ಪ್ರಾಂಶುಪಾಲರಾದ ಕೆ. ಆರ್. ಗಂಗಾಧರ್ ರವರು ಸುಶ್ಮಿತಾಳನ್ನು ಸನ್ಮಾನಿಸಿ ಅಭಿನಂದಿಸಿದರು. ಗೌಡ ಗ್ರಾಮ ಸಮಿತಿ ಯ ಕಾರ್ಯದರ್ಶಿ ಭವಾನಿ ಶಂಕರ ಅಡ್ತಲೆ ಯವರು ಮುಂಬರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಸಮುದಾಯದರು ಅನುಸರಿಸಬೇಕಾದ ವಿಧಾನ ಬಗ್ಗೆ ಮಾಹಿತಿ ನೀಡಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಕೇಶವ ಅಡ್ತಲೆ ಮತ್ತು ಮಹಿಳಾ ಸಮಿತಿಯ ಅಧ್ಯಕ್ಷರಾದ ವಾರಿಜ ಕುರುಂಜಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .















ಈ ಸಂದರ್ಭದಲ್ಲಿಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪಾ ಮೇದಪ್ಪ , ಪದಾಧಿಕಾರಿಗಳು ,ಸಮಿತಿ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.
ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ಮತ್ತು ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ ಸರ್ವರನ್ನು ಸ್ವಾಗತಿಸಿ,
ನಿವೃತ್ತ ಶಿಕ್ಷಕಿ ದಮಯಂತಿ ಅಡ್ಕ ಬಳೆ ಪ್ರಾರ್ಥಿಸಿ ,ಗೌಡ ಗ್ರಾಮ ಸಮಿತಿ ಸದಸ್ಯೆ ಭಾರತಿ ಪುರುಷೋತ್ತಮ ಉಳುವಾರು ವಂದಿಸಿದರು.










