ಸಂಸ್ಕಾರ ತಾಯಿಯಿಂದ ಬರಬೇಕು – ನಳಿನಾಕ್ಷಿ ವಿ. ಆಚಾರ್ಯ
ಸಂಸ್ಕಾರ ತಾಯಿಯಿಂದ ಬರಬೇಕು. ಹಿರಿಯರು ಅಳವಸಿಕೊಂಡರೆ ಮಕ್ಕಳೂ ಅದನ್ನು ಅನುಸರಿಸುತ್ತಾರೆ. ಮೊದಲು ನಾವು ನಮ್ಮ ಬಗ್ಗೆ ಹೆಮ್ಮೆ ಪಡಬೇಕು. ಆಗ ಇತರರೂ ನಮ್ಮನ್ನು ಗೌರವಿಸುತ್ತಾರೆ. ನಮ್ಮ ಸಮಾಜದಲ್ಲಿ ನಾವು ಹೇಗೆ ಬದುಕುತ್ತಿದ್ದೇವೆ, ನಮ್ಮ ಮಕ್ಕಳು ಹೇಗೆ ಗೌರವಯುತವಾಗಿ ಜೀವನ ಮಾಡಬೇಕು ಎಂಬುದರ ಬಗ್ಗೆ ಅರಿವು ಇರಬೇಕು. ಅಂತಹ ಅರಿವು ಈ ರೀತಿಯ ಧಾರ್ಮಿಕ ಉಪನ್ಯಾಸಗಳ ಮೂಲಕ ಅನುಷ್ಠಾನಗೊಳ್ಳುತ್ತದೆ
ಎಂದು ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ಹೇಳಿದರು. ಅವರು ಸೆ. 16ರಂದು ಸುಳ್ಯ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಬೆಳ್ಳಾರೆ ಪನ್ನೆ ಇದರ ಆಶ್ರಯದಲ್ಲಿ 35ನೇ ವರ್ಷದ ಕನ್ಯಾ ಸಂಕ್ರಮಣದ ಶ್ರೀ ವಿಶ್ವಕರ್ಮ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಾ ಅಭಿಪ್ರಾಯಪಟ್ಟರು. ಸಂಘದ ಅಧ್ಯಕ್ಷ ಸಿ.ಹೆಚ್. ಸೋಮಶೇಖರ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿ ಪದ್ಮನಾಭ ಆಚಾರ್ಯ ಕಡೆಪಾಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಾರಾಯಣ ಪುರೋಹಿತ್ ನೂಜಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸುಳ್ಯ ತಾಲೂಕು ವಿಶ್ವಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಶ್ರೀಮತಿ ಸುಮಾ ವಿ. ಆಚಾರ್ಯ ಪ್ರಾರ್ಥಿಸಿದರು.
















ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ.ಆರ್ ಸ್ವಾಗತಿಸಿ, ಗಿರೀಶ್ ಆಚಾರ್ಯ ವಂದಿಸಿದರು. ಕಮಲಾಕ್ಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಸುಳ್ಯ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸೋಮಶೇಖರ್ ಹೆಚ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಾರಾಯಣ ಪುರೋಹಿತ ನೂಜಾಡಿಯವರ ನೇತೃತ್ವದಲ್ಲಿ ವಿಶ್ವಕರ್ಮ ಪೂಜೆ ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರೈತ ಹೇಗೆ ನಮ್ಮ ದೇಶದ ಬೆನ್ನೆಲುಬು ಎಂದು ಹೇಳುತ್ತೇವೆಯೋ ಅದೇ ರೀತಿ ವಿಶ್ವಕರ್ಮ ಸಮಾಜದವರೂ ಕೂಡ. ಯಾವುದೇ ದೇವಸ್ಥಾನ, ದೈವಸ್ಥಾನ, ಮನೆ, ಮಂದಿರ ನಿರ್ಮಾಣವಾಗಬೇಕಾದರೆ ಅಲ್ಲಿ ವಿಶ್ವಬ್ರಾಹ್ಮಣರ ಅಗತ್ಯ ಇರುತ್ತದೆ. ನಮ್ಮ ನಮ್ಮ ನಡುವೆ ಪ್ರೀತಿ ಇರಲಿ. ಎಲ್ಲರೂ ಒಗ್ಗಟ್ಟಾಗಿ ಸಮಾಜ ಕಟ್ಟೋಣ – ಪದ್ಮನಾಭ ಆಚಾರ್ಯ










