ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಹಬ್ಬದಲ್ಲಿ ಡಿಗ್ರಿ ಕಾಲೇಜು ಸುಳ್ಯ ತಂಡಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಬ್ರಹ್ಮಣ್ಯಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸೆ -16ರಂದು ನಡೆದ ದ. ಕ ಜಿಲ್ಲಾ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘಗಳ ಸಮ್ಮಿಲನ ಮತ್ತೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ತಂಡ ಸಮಗ್ರ ದ್ವೀತೀಯ ಬಹುಮಾನ ಪಡೆದುಕೊಂಡಿದೆ. ಪ್ರಥಮ ಬಿಕಾಂ ಶ್ರಾವ್ಯ ಪ್ರಭಂದ ಸ್ಪರ್ಧೆಯಲ್ಲಿ ಪ್ರಥಮ, ಯಕ್ಷಿತಾ ಮತ್ತು ತಂಡ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ, ಯುವರಾಜ್ ಮತ್ತು ತಂಡ ಪ್ರಹಸನ ಸ್ಪರ್ಧೆಯಲ್ಲಿ ತೃತೀಯ, ಗೌತಮ್ ಮತ್ತು ತಂಡ ರೀಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ, ಅಮೂಲ್ಯ ಅಂತಿಮ ಬಿ. ಕಾಮ್ ಹಾಡು ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದು ಸಮಗ್ರ ದ್ವಿತೀಯ ಬಹುಮಾನ ಪಡೆದುಕೊಂಡರು.