














ಬೆಳ್ಳಾರೆಯ ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘದ
2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 14ರಂದು ಸಂಘದ ಸದಸ್ಯರಾದ ವಸಂತಕುಮಾರ್ ಪಡ್ಪುರವರ ಮನೆ ವಠಾರದಲ್ಲಿ ಜರುಗಿತು. ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಚಂದ್ರಕುಮಾರ್ ಪಡ್ಪು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಅಧ್ಯಕ್ಷ ಶ್ರೀನಿವಾಸ ಕುರುಂಬುಡೇಲು ಸಭೆಗೆ ಮಂಡಿಸಿದರು. ಮುಂದಿನ ವರ್ಷದ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನಂತರ 2025- 26ರ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಕುಮಾರ್ ಪಡ್ಪು , ಕಾರ್ಯದರ್ಶಿಯಾಗಿ ವಸಂತ ಕುಮಾರ ಪಡ್ಪು ಆಯ್ಕೆಯಾದರು. ವಸಂತಗೌಡ ಸ್ವಾಗತಿಸಿ, ಕೊರಗಪ್ಪ ಕುರುಂಬುಡೇಲು ವಂದಿಸಿದರು.










