ಬೈಕ್ ಸವಾರನ ಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು
ಸುಳ್ಯದ ಓಡಬಾಯಿ ಹೆದ್ದಾರಿ ಬಳಿ ಸರಣಿ ಅಪಘಾತ ಸಂಭವಿಸಿ ಮೂರು ವಾಹನಗಳು ಸಣ್ಣಪುಟ್ಟ ಜಖಂಗೊಂಡ ಘಟನೆ ಹಾಗೂ ಬೈಕ್ ಸವಾರನ ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸೆ ೧೭ ರಂದು ವರದಿಯಾಗಿದೆ.















ಮೂರೂ ವಾಹನಗಳು ಸುಳ್ಯದಿಂದ ಪೈಚಾರು ಕಡೆಗೆ ಹೋಗುತ್ತಿದ್ದು, ಮುಂದಿನ ಸಾಲಿನಲ್ಲಿ ಹೋಗುತ್ತಿದ್ದ ಕಾರು ತಾಂತ್ರಿಕ ದೋಷದಿಂದ ಸಡನ್ ಆಗಿ ನಿಂತ ಕಾರಣ ಅದರ ಹಿಂದಿನಿಂದ ಹೋಗುತ್ತಿದ್ದ ಆಟೋ ರಿಕ್ಷಾ ಕಾರಿನ ಹಿಂಭದಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಿಕ್ಷಾದ ಹಿಂದಿನಿಂದ ಬರುತ್ತಿದ್ದ ಬುಲೆಟ್ ಬೈಕ್ ಸವಾರನ ನಿಯಂತ್ರಣ ತಪ್ಪಿ ಆಟೋರಿಕ್ಷಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸವಾರನ ಕಾಲಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ. ಅವರನ್ನು ಸುಳ್ಯ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಲಾಯಿತು ಎಂದು ತಿಳಿದು ಬಂದಿದೆ.










