ನಗರ ಪಂಚಾಯತ್ ಸುಳ್ಯ ಮತ್ತು ಕೆಯರ್ ಎನ್ ಸೇಫ್ ಓಫ್ ಇಂಡಿಯಾ ಹಾಗೂ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಜಿಲ್ಲಾ ಕೌಶಲ್ಯಾ ಮಿಶನ್ ಮಂಗಳೂರು ಸಹಯೋಗದಲ್ಲಿ ಇವರ ಜಂಟಿ ಆಶ್ರಯದಲ್ಲಿ ಗರ್ಭಾಶಯ ಕ್ಯಾನ್ಸರ್ ಪ್ರತಿರೋಧ ಜಾಗೃತಿ ಕಾರ್ಯಕ್ರಮ ಮತ್ತು ಪ್ರಧಾನಮಂತ್ರಿ ಆತ್ಮನಿರ್ಭರ್ ನಿಧಿ ಯೋಜನೆ 20 ‘ಲೋಕ ಕಲ್ಯಾಣ ಮೇಳ’ ಪಿಎಮ್ ಸ್ವನಿಧಿ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯ ಮಾಹಿತಿ ಕಾರ್ಯಕ್ರಮ ಸೆ 17 ರಂದು ನಗರ ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನ ಪಂ ಅಧ್ಯಕ್ಷೆ ಶಶಿಕಲಾ.ಎ ನೀರಬಿದಿರೆ ರವರು ನಿರ್ವಹಿಸಿದರು.ಈ ವೇಳೆ ಮಾತನಾಡಿದ ಅವರು ಕೇಂದ್ರ ಸರಕಾರದಿಂದ ಬಡ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ ಒಂದು ಉತ್ತಮ ಯೋಜನೆಯಾಗಿದೆ ಆತ್ಮ ನಿರ್ಭರ ಸಾಲ ಯೋಜನೆ. ಇದರ ಪ್ರಯೋಜನವನ್ನು ಜನರು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪಂಚಾಯತಿಯಿಂದ ನೀಡುವ ನಿಯಮಗಳಿಗೆ ಬದ್ಧವಾಗಿ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಳ್ಳ ಬೇಕೆಂದು ಹೇಳಿದರು. ಅಲ್ಲದೆ ಹೆಚ್ಚಿನದಾಗಿ ತಳ್ಳುಗಾಡಿಗಳಿಗೆ ಹೆಚ್ಚಿನ ಆದ್ಯತೆಗಳು ಇದ್ದು ಈ ಒಂದು ನಿಯಮಗಳನ್ನು ಪಾಲಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಉಪಾಧ್ಯಕ್ಷರಾದ ಬುದ್ದನಾಯ್ಕ.ಜಿ ಕಾರ್ಯಕ್ರಮಕ್ಕೆ ಶುಭಾರೈಸಿದರು.
ವೇದಿಕೆಯಲ್ಲಿ ನ ಪಂ ಸದಸ್ಯರುಗಳಾದ ಬಾಲ ಕೃಷ್ಣಭಟ್ ಕೊಡಂಕೇರಿ, ಶರೀಫ್ ಕಂಠಿ, ಶ್ರೀಮತಿ ಶೀಲಾ ಕುರುಂಜಿ,ಮೊದಲಾದವರು ಉಪಸ್ಥಿತರಿದ್ದರು.
















ಸಂಪನ್ಮೂಲ ವ್ಯಕ್ತಿಯಾಗಿ
ಕೆಯರ್ ಎನ್ ಸೇಫ್ ಆಫ್ ಇಂಡಿಯಾ ಇದರ ಶ್ರೀಮತಿ ಅಮಿತರವರು ಭಾಗವಹಿಸಿ ಆತ್ಮ ನಿರ್ಧರ ಯೋಜನೆ ಅಡಿಯಲ್ಲಿ ಸಿಗುವ ಸೌಲಭ್ಯಗಳು ಮತ್ತು ಅದನ್ನು ಬಳಸುವ ಕ್ರಮಗಳ ಬಗ್ಗೆ 10,000 ಸಾಲ ಪಡೆದು ಅದನ್ನು ಅಭಿವೃದ್ಧಿಗೊಳಿಸುವ ಮೂಲಕ ಇನ್ನು ಹೆಚ್ಚಿನ ವ್ಯಾಪಾರ ಉದ್ದಿಮೆ ಕೇಂದ್ರಗಳನ್ನು ರಚಿಸುವ ಬಗ್ಗೆ ಮಾಹಿತಿಯನ್ನು ನೀಡಿದರು.
ಕೌಶಲ್ಯಾಭಿವೃದ್ಧಿ ಇಲಾಖೆ ಮಂಗಳೂರು ಇದರ ಅಭಿಯಾನ ವ್ಯವಸ್ಥಾಪಕರಾದ ಶ್ರೀಮತಿ ಐರಿನ್ ರೆಬೆಲ್ಲೊ ರವರು ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಸುಳ್ಯ ಇದರ ಶ್ರೀಮತಿ ಸುಜಾತಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಸದಸ್ಯರುಗಳು ಹಾಗೂ ಬೀದಿಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.
ಸಮುದಾಯ ಸಂಘಟಕರಾದ ಶ್ರೀಮತಿ ಜಯಲಕ್ಷ್ಮಿ ಸ್ವಾಗತಿಸಿ, ನ.ಪಂ ಸಿಬ್ಬಂದಿ ದಿಲೀಪ್ ರವರು ಕಾರ್ಯಕ್ರಮ ನಿರೂಪಿಸಿ ಸಿ ಅರ್ ಪಿ ಶ್ರೀಮತಿ ತೀರ್ಥಕಲಾ ವಂದಿಸಿದರು.










