ಸುದ್ದಿ ಸುಳ್ಯ ಹಬ್ಬ ಪ್ರಯುಕ್ತ ಜಾಲ್ಸೂರಿನಲ್ಲಿ ಹಗ್ಗಜಗ್ಗಾಟ ಸ್ಪರ್ಧೆ

0

ಸಮಿತಿ ಸಭೆಯಲ್ಲಿ ನಿರ್ಧಾರ

ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಗೆ 40 ವರ್ಷ ಹಾಗೂ ಸುಳ್ಯ ತಾಲೂಕು ರಚನೆಗೊಂಡು 60 ವರ್ಷವಾಗುತ್ತಿರುವ ಪ್ರಯುಕ್ತ ಸುದ್ದಿ‌‌ ಜಾಲ್ಸೂರು ಗ್ರಾಮ‌ ಸಮಿತಿ ನೇತೃತ್ವದಲ್ಲಿ ಜಾಲ್ಸೂರಿನಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಸೆ.17ರಂದು ಗ್ರಾಮ ಸಮಿತಿ ಅಧ್ಯಕ್ಷ ‌ಚೆನ್ನಕೇಶವ ಜಾಲ್ಸೂರುರವರ ಅಧ್ಯಕ್ಷತೆಯಲ್ಲಿ ಅಡ್ಕಾರು ಸಂಜೀವಿನಿ ಒಕ್ಕೂಟದ ಕಚೇರಿಯಲ್ಲಿ ಸಭೆ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ಅಡ್ಕಾರುಬೈಲು, ಉಪಾಧ್ಯಕ್ಷೆ ತಿರುಮಲೇಶ್ವರಿ ಅರ್ಭಡ್ಕ, ಸುದ್ದಿ ಗ್ರಾಮ ಸಮಿತಿಯ ಗೌರವಾಧ್ಯಕ್ಷ ಜಾಕೆ ಸದಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಸುಪ್ರಿತ್ ಮೋಂಟಡ್ಕ, ಕೋಶಾಧಿಕಾರಿ ಎನ್.ಎಸ್. ಭಟ್, ಸಂಚಾಲಕ ಕೆ.ಗಂಗಾಧರ ಕಾಳಮ್ಮನೆ, ಕಾರ್ಯಾಧ್ಯಕ್ಷ ಬಾಬು ಕೆ.ಎಂ. ಕದಿಕಡ್ಕ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಉದ್ಯಮಿ ಮಹಮ್ಮದ್ ಕಮಲ್, ಅಡ್ಕಾರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರ್, ರಶ್ಮಿ ಕಾಳಮ್ಮನೆ, ಸುಮತಿ ಹುಲಿಮನೆ,
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವೇದಾ ಶೆಟ್ಟಿ ಸಭೆಯಲ್ಲಿ ಇದ್ದರು.

ಜಾಲ್ಸೂರು ಗ್ರಾಮ ವ್ಯಾಪ್ತಿಯಲ್ಲಿ ಪುರುಷರ ಮತ್ತು ಮಹಿಳೆಯರ ಹಗಜಗ್ಗಾಟ ನವೆಂಬರ್ ತಿಂಗಳಿನಲ್ಲಿ ನಡೆಸುವ ಕುರಿತು ಚರ್ಚೆಗಳು ನಡೆಯಿತು. ಹಗ್ಗಜಗ್ಗಾಟ ಸ್ಪರ್ಧೆಯ ಸಂಚಾಲಕರಾಗಿ ಹರಿಪ್ರಕಾಶ್ ಅಡ್ಕಾರುರವರನ್ನು ಆಯ್ಕೆ ಮಾಡಲಾಯಿತು

ಸುದ್ದಿ ಕಚೇರಿಯ ವ್ಯವಸ್ಥಾಪಕ ಯಶ್ವಿತ್‌ ಕಾಳಮ್ಮನೆ ಮಾತನಾಡಿ, ಗ್ರಾಮದ ಚಿತ್ರೀಕರಣದ ದಾಖಲೀಕರಣ, ಮರೆಯಾದ ಸಾಧಕರ ಗುರುತಿಸುವಿಕೆ ಹಾಗೂ ಸುಳ್ಯ ಹಬ್ಬ ನಡೆಸುವ ಕುರಿತು ಮಾಹಿತಿ‌ ನೀಡಿದರು.

ಶಿವಪ್ರಸಾದ್ ಕೇರ್ಪಳ ಸ್ವಾಗತಿಸಿದರು. ‌ಸುಪ್ರಿತ್ ಮೋಂಟಡ್ಕ ವಂದಿಸಿದರು.