ಸಂತ ಅಲೋಶಿಯಸ್ ಕಾಲೇಜ್ ಚಾಂಪಿಯನ್ಸ್
ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ದ ಆಶ್ರಯದಲ್ಲಿ ಸೆ.15 ರಂದು ನಡೆದ ಜಿಲ್ಲಾ ಮಟ್ಟದ ಬಾಲಕ- ಬಾಲಕಿ ಯರ ಪದವಿ ಪೂರ್ವ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಸಂತ ಅಲೋಷಿಯಸ್ ಕಾಲೇಜಿನ ತಂಡವನ್ನು ಹೊಂದಿದ ಮಂಗಳೂರು ತಾಲೂಕು ತಂಡವು ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಅವಳಿ ತಂಡಗಳು ಚಾಂಪಿಯನ್ ಪುರಸ್ಕಾರ ಪಡೆಯಿತು.

ಬಾಲಕರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಪುತ್ತೂರು ತಾಲೂಕು ತಂಡವು 25-17,25-19 ಅಂಕಗಳಿಂದ ಪರಾಜಯಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿ
ಪಟ್ಟುಕೊಂಡಿತು.ಬಾಲಕಿಯರ ವಿಭಾಗದ ಪೈನಲ್ ನಲ್ಲಿ ಸುಳ್ಯ ತಂಡವು 25-8, 25-16 ಅಂಕಗಳಿಂದ ಸೋತು ದ್ವಿತೀಯ ಸ್ಥಾನ ಪಡೆಯಿತು.
ಬಾಲಕರ ವಿಭಾಗದಲ್ಲಿ ಉತ್ತಮ ರಿಸೀವರ್ ಅಕಾಯಿ ಪುತ್ತೂರು, ಬೆಸ್ಟ್ ಆಲ್ ರೌಂಡರ್ ಅಹಮ್ಮದ್ ರಿಝಾ ಮಂಗಳೂರು, ಬೆಸ್ಟ್ ತ್ರೋವರ್ ಮನ್ವಿತ್ ಮಂಗಳೂರು ವೈಯಕ್ತಿಕ ಬಹುಮಾನ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ಉತ್ತಮ ರಿಸೀವರ್ ಹಂಸಿನಿ ಮಂಗಳೂರು,ಬೆಸ್ಟ್ ಆಲ್ ರೌಂಡರ್ ಸಂಜನಾ ಮಂಗಳೂರು, ಬೆಸ್ಟ್ ತ್ರೋವರ್ ಚಿಂತನಾ ಸುಳ್ಯ ವೈಯಕ್ತಿಕ ಬಹುಮಾನ ಗಳಿಸಿದರು.















ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ, ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲ್, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ,ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರ ಶಿವರಾಮ ಯೇನೆಕಲ್ಲು,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಮುಖ್ಯ ಶಿಕ್ಷಕಿ ನಂದಾ ಹರೀಶ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್,ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಹ್ಯಾರೀಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷ ಗುಣವರ್ಧನ ಕೆದಿಲ, ವಿದ್ಯಾರ್ಥಿ ಸರಕಾರದ ಸಂಯೋಜಕ ಜಯಪ್ರಕಾಶ್. ಆರ್, ಕ್ರೀಡಾ ಸಂಯೋಜಕಿ ಸವಿತಾ ಕೈಲಾಸ್, ಕ್ರೀಡಾ ಕಾರ್ಯದರ್ಶಿ ಧನುಷ್ ಕಾಶಿಕಟ್ಟೆ, ಪ್ರಮುಖರಾದ ಭಾರತಿ ದಿನೇಶ್, ಶೋಭಾ ಗಿರಿಧರ್ ಮತ್ತಿತರರು ಇದ್ದು ಬಹುಮಾನ ವಿತರಿಸಲಾಯಿತು.
ಕ್ರೀಡಾಮನೋಭಾವನೆಯು ಆಟಗಾರರ ಪ್ರಗತಿಗೆ ಅಸ್ತ್ರ : ಶಾಸಕಿ ಭಾಗೀರಥಿ
ಕ್ರೀಡೆಯು ಕ್ರೀಡಾಳುಗಳ ಬದುಕಿಗೆ ಹೊಸ ಆಯಾಮ ನೀಡುತ್ತದೆ. ಕ್ರೀಡಾ ಮನೋಭಾವನೆಯು ಆಟಗಾರರ ಪ್ರಗತಿಗೆ ಅಸ್ತ್ರ.ಕ್ರೀಡಾಳುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಗುರಿಯತ್ತ ಸಾಗುವ ಗುಣ ಹೊಂದಬೇಕು.ಕ್ರೀಡಾ ಸಾಧನೆಯು ಬದುಕಿಗೆ ಹೊಸ ಭವಿಷ್ಯ ನೀಡುತ್ತದೆ ಆದುದರಿಂದ ಕಷ್ಟ ಪರಿಶ್ರಮದ ಅಭ್ಯಾಸ ಅತ್ಯಗತ್ಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ವ್ಯಾಸಂಗ ಮಾಡುವ ಕಾಲದಲ್ಲಿ ಕ್ರೀಡೆಗಳತ್ತ ಗಮನ ಹರಿಸಲು ಶಾಲೆಗಳಲ್ಲಿ ನಡೆಯುವ ಪಂದ್ಯಾಟಗಳು ಪೂರಕ.ಆರೋಗ್ಯ ವೃದ್ದಿಯೊಂದಿಗೆ ಮಾನಸಿಕ ಸಂತಸ ನೀಡುವ ಕ್ರೀಡೆಗಳ ಬಗ್ಗೆ ಮಕ್ಕಳು ಆಕರ್ಷಿತರಾಗುವಂತೆ ಮಾಡಬೇಕು ಎಂದರು.
ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ,ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರ ಶಿವರಾಮ ಯೇನೆಕಲ್ಲು, ಕೆ.ಎಸ್. ಗೌಡ ವಿದ್ಯಾಲಯದ ಪ್ರಾಚಾರ್ಯ ಸದಾನಂದ ಮಾವಾಜಿ,ಮುಲ್ಕಿ ಮೆಡ್ಲಿನ್ ಪಿ.ಯು ಕಾಲೇಜು ಪ್ರಾಂಶುಪಾಲೆ ಲೀರಿಯಾ ಶಾಂತಿ ಮೆಂಡೋಲ್ಸಾ ಮುಖ್ಯ ಅತಿಥಿಗಳಾಗಿದ್ದರು.
ಎಸ್. ಎಸ್.ಪಿ.ಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್,ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಯೋಜಕ ಜಯಪ್ರಕಾಶ್. ಆರ್, ಕ್ರೀಡಾ ಕಾರ್ಯದರ್ಶಿ ಧನುಷ್ ಕಾಶಿಕಟ್ಟೆ ವೇದಿಕೆಯಲ್ಲಿದ್ದರು.
ದ.ಕ ಜಿಲ್ಲೆಯ ವಿವಿಧ ತಾಲೂಕುಗಳ ಬಾಲಕ ಬಾಲಕಿಯರ ವಿಭಾಗದ 18 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.ಉಪನ್ಯಾಸಕಿ ಶ್ರುತಿ ಅಶ್ವಥ್ ನಿರೂಪಿಸಿದರು.










