ಪಂಜ ವನಿತಾ ಸಮಾಜದ ಮಹಾಸಭೆ : ಕಾರ್ಯಕಾರಿ ಸಮಿತಿ ರಚನೆ

0

ವನಿತಾ ಸಮಾಜ ಪಂಜ ಇದರ ಮಹಾಸಭೆಯು ಸೆ.17 ರಂದು ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಯಾಗಿ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಡಿ ಪ್ರಸಾದ್ ಕಾನತ್ತೂರ್ ಹಾಗೂ ವನಿತಾ ಸಮಾಜದ ಗೌರವಾಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ, ಕಾರ್ಯದರ್ಶಿ ಶ್ರೀಮತಿ ಸ್ವರ್ಣ ರೋಹಿತ್ , ಖಜಾಂಚಿ ಶ್ರೀಮತಿ ಭವ್ಯ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀಮತಿ ಸುಮಾ ಕುದ್ವ, ಕಾರ್ಯದರ್ಶಿ ಯಾಗಿ ಶ್ರೀಮತಿ ಸ್ವರ್ಣ ರೋಹಿತ್, ಖಜಾಂಚಿ ಯಾಗಿ ಶ್ರೀಮತಿ ಭವ್ಯ ಕುದ್ವ ಪುನರಾಯ್ಕೆ ಗೊಂಡರು.
ಉಪಾಧ್ಯಕ್ಷರಾಗಿ ಶ್ರೀಮತಿ ಪವಿತ್ರ ಕುದ್ವ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರೇಮ ಬೇರ್ಯ, ನಿರ್ದೇಶಕರಾಗಿ ಶ್ರೀಮತಿ ಕಮಲ ಬಿಡಾರಕಟ್ಟೆ, ಶ್ರೀಮತಿ ಆಶಾ ಮನು, ಶ್ರೀಮತಿ ಉಮಾ ಮೆದಪ್ಪ, ಶ್ರೀಮತಿ ಉಷಾ ಮಲ್ಕಜೆ ಆಯ್ಕೆಯಾದರು

ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರೇಮ ಬೇರ್ಯ ನಿರೂಪಿಸಿದರು, ಶ್ರೀಮತಿ ಹೇಮಲತಾ ಪ್ರಾರ್ಥಿಸಿದರು., ಶ್ರೀಮತಿ ಭವ್ಯ ಕುದ್ವ ಸ್ವಾಗತಿಸಿದರು, ಶ್ರೀಮತಿ ಸುಮಾ ಕುದ್ವ ವಾರ್ಷಿಕ ವರದಿ ವಾಚಿಸಿದರು, ಶ್ರೀಮತಿ ಸ್ವರ್ಣ ರೋಹಿತ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು,