ಅಜ್ಜಾವರ ಅಡ್ಕದಲ್ಲಿ ಕಾರ್ಯಚರಿಸುತ್ತಿರುವ ಎಬಿ ಎಂಟರ್ ಪ್ರೈಸಸ್ ನಲ್ಲಿ ವರ್ಷಂಪ್ರತಿ ನಡೆಸುತ್ತಿರುವ ಗ್ರ್ಯಾಂಡ್ ಮೌಲಿದ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಎಬಿ ಎಂಟರ್ ಪ್ರೈಸಸ್ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಬಿ ಎಂಟರ್‌ಪ್ರೈಸಸ್ ಮಾಲಕ ಎಬಿ ಆಶ್ರಫ್ ಸಹದಿ ವಹಿಸಿದರು.
















ಸಯ್ಯದ್ ಮಿಸ್ಬಾಯಿ ತಂಙಳ್ ಮೌಲಿದ್ ಮಜ್ಲಿಸ್ ಉದ್ಘಾಟಿಸಿ ದುವಾಶಿರ್ವಚನ ಮಾಡಿದರು.
ಪ್ರಖ್ಯಾತ ಧಾರ್ಮಿಕ ಪಂಡಿತ ಪೇರೊಡ್ ಅಬ್ದುಲ್ ರಹಿಮಾನ್ ಸಖಾಫಿ ಗ್ರ್ಯಾಂಡ್ ಮೌಲಿದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಯ್ಯದ್ ಸುಹೈಲ್ ಅಸಖಾಪ್ ಮಾಡಕ್ಜರ ತಂಙಳ್ ಸಮಾರೋಪ ದುವಾಶಿರ್ವಚನ ಮಾಡಿದರು. ಸಯ್ಯದ್ ಹುಸೈನ್ ತಂಙಳ್ ಅದೂರ್,ಮಹಮ್ಮದ್ ಆಲಿ ಸಖಾಫಿ ,ಅಶ್ರಫ್ ನಯಿಮಿ,ಹಾಪಿಳ್ ನಿಝಾಮಿ ಚೆನ್ನಾರ್,ಅಶ್ರಫ್ ನಹಿಮಿ,ಅಬ್ದುಲ್ ಖಾದರ್ ಸಖಾಫಿ ಮುದುಗಡ,ಸಲಾಹುದ್ದೀನ್ ಸಖಾಫಿ, ಕಲೀಲ್ ಹಿಮಮಿ ತಂಬಿನಮಕ್ಕಿ,ಸಿರಾಜುದ್ದೀನ್ ಸಖಾಫಿ ಗಾಂಧಿನಗರ, ಅಬ್ದುಲ್ಲಾಹಿ ಸಹದಿ,ಅಶ್ರಫ್ ನಹಿಮಿ,ಹಸನ್ ಸಖಾಫಿ ಬೆಳ್ಳಾರೆ,ಹಾಜಿ ಕೆ ಎಂ ಮುಸ್ತಫಾ, ಅಬ್ದುಲ್ ರಹಿಮಾನ್ ಸಂಕೇಶ್,ಹಮೀದ್ ಬೀಜಕೊಚ್ಚಿ, ಹಮೀದ್ ಸುಣ್ಣಮೂಲೆ,ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ಆದಂ ಹಾಜಿ ಕಮ್ಮಾಡಿ, ನ.ಪಂ ಸದಸ್ಯ ಉಮ್ಮರ್ ಕೆ ಎಸ್,ಅಬ್ದುಲ್ ರಜಾಕ್ ಹಾಜಿ ರಾಜಧಾನಿ, ಸೇರಿದಂತೆ ಅನೇಕ ಉಲಮಾ ಮತ್ತು ಉಮರಾ ನಾಯಕರು ವೇದಿಕೆಯಲ್ಲಿ ಇದ್ದರು.
ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
ಎ ಬಿ ಹಸೈನಾರ್ ಅಮಾನಿ,ಎ ಬಿ ಹಮೀದ್, ಎ ಬಿ ಮಹಮ್ಮದ್ ಕುಂಞಿ ಕಾರ್ಯಕ್ರಮ ನಿರೂಪಿಸಿದರು










