ಭಾಜಪಾ ದ.ಕ.ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ

0

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ವನ್ನು ಭಾಜಪ ಹಿಂದುಳಿದ ವರ್ಗಗಳ ಮೋರ್ಚ ಸುಳ್ಯ ಮಂಡಲ ನೇತೃತ್ವದಲ್ಲಿ ಸುಬ್ರಮಣ್ಯದ ಆದಿ ಸುಬ್ರಮಣ್ಯ ಸಭಾಭವನ ಸೆ.17 ರಂದು ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಭಾಜಪ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲ ಅಧ್ಯಕ್ಷರಾದ ಗಿರೀಶ್ ಆಚಾರ್ಯ ಪೈಲಾಜೆ ವಹಿಸಿದ್ದರು. ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಲಳಂಬೆ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಜಿಲ್ಹಾ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಮಹೇಶ್ ಜೋಗಿ ಕಾರ್ಯಕ್ರಮ ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವಕರ್ಮ ದಿನಾಚರಣೆ ಮಹತ್ವ ವನ್ನು ಶಿಕ್ಷಕಿ ನಳಿನಾಕ್ಷಿ ಕಲ್ಮಡ್ಕ ಉಪನ್ಯಾಸ ನೀಡಿದರು. ರಾಜ್ಯ ಒಬಿಸಿ ಕಾರ್ಯದರ್ಶಿ ಗಳಾದ ಆರ್ ಸಿ ನಾರಾಯಣ ರೆಂಜಲಾಡಿ, ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ ಕಂದಡ್ಕ, ಪ್ರದೀಪ್ ರೈ, ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಶಶಿಧರ ಕಲ್ಮಂಜ, ಜಿಲ್ಲಾ ಒಬಿಸಿ ಕಾರ್ಯದರ್ಶಿ ಚಂದ್ರಶೇಖರ ಪನ್ನೆ, ಸದಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಭೆಯಲ್ಲಿ ಎಸ್ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ತೆರ್ಗಡೆಯಾದ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಾದ ಭವಿಶ್, ಅಭಿಘ್ನ, ಸ್ವಾತಿ ಎಸ್ ಅವರನ್ನು ಗೌರವಿಸಿ
ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ರವಿ ಕಕ್ಕೆಪದವು ಅವರ ಪುತ್ರ ಕಾರ್ತಿಕ್ ಸುಬ್ರಹ್ಮಣ್ಯ ಅವರನ್ನು ಅಭಿನಂದಿಲಾಯಿತು.
ಕಾರ್ತಿಕ್ ಸುಬ್ರಹ್ಮಣ್ಯ ಪ್ರಾರ್ಥನೆಯನ್ನು ನೆರವೇರಿಸಿದರು.


ಗಿರೀಶ್ ಆಚಾರ್ಯ ಫೈಲಾಜೆ ಸ್ವಾಗತಿಸಿದರು. ಒಬಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಅಡ್ಕಾರ್ ವಂದಿಸಿದರು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯವಿಜಯ ಚಾರ್ಮತ ಕಾರ್ಯಕ್ರಮ ನಿರೂಪಿಸಿದರು.