ಶ್ರೀಮತಿ ಲಕ್ಷ್ಮೀ ಅಮ್ಮ ಕೋಡಿಬೈಲು‌ ನಿಧನ

0

ಕೋಡಿಬೈಲು ದಿ. ಸೀತಾರಾಮ ಭಟ್ಟರ ಪತ್ನಿ ಶ್ರೀಮತಿ ಲಕ್ಷ್ಮೀ ಅಮ್ಮ ಕೋಡಿಬೈಲು ಸೆ. 18ರಂದು ತಮ್ಮ ಕಿರಿಯ ಪುತ್ರ ರಾಮಚಂದ್ರ ಕೋಡಿಬೈಲುರವರ ಮನೆ ಪೆರುವಾಜೆಯ ‘ನಳಂದ’ ದಲ್ಲಿ ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಕೃಷಿಕ ರಾಮಚಂದ್ರ ಭಟ್ ಕೋಡಿಬೈಲು, ಪುತ್ರಿಯರಾದ ಶ್ರೀಮತಿ ಪರಮೇಶ್ವರಿ ಜಯಶಂಕರ ಮಕ್ಕಿಮನೆ, ಶ್ರೀಮತಿ ಶಾಂತಾ ಸತ್ಯನಾರಾಯಣ ಕೋಟೆ, ಸಹೋದರರಾದ ಮಹಾಲಿಂಗೇಶ್ವರ ಭಟ್ ಬೆಂಗಳೂರು, ಶಿವರಾಮ ಭಟ್ ಕುಂಬೆತ್ತಿಬನ, ಸೊಸೆಯಂದಿರಾದ ಶ್ರೀಮತಿ ವಿದ್ಯಾಲಕ್ಷ್ಮೀ ಸತ್ಯನಾರಾಯಣ ಕೋಡಿಬೈಲು ಮತ್ತು ಶ್ರೀಮತಿ ಅಶ್ವಿನಿ ರಾಮಚಂದ್ರ ಕೋಡಿಬೈಲು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.