ಘನ ತಾಜ್ಯ ಘಟಕ ಕಟ್ಟಡದ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭ ಮಾಡುವ ಬಗ್ಗೆ ಚರ್ಚೆ
ಅರಂತೋಡು ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ಸೆ. ೧೮ರಂದು ಪಂಚಾಯತ್‌ನ “ಗ್ರಾಮ ಸ್ವರಾಜ್” ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪಂಚಾಯತ್ ಆಡಳಿತದ ಆಡಳಿತಾವಧಿ ೩,೪ತಿಂಗಳಲ್ಲಿ ಮುಗಿಯುವುದರಿಂದ ಬೆಂಕಿಗೆ ಆಹುತಿಯಾದ ಘನ ತ್ಯಾಜ್ಯ ಘಟಕ “ಸ್ವಚ್ಛ ಸಂಕೀರ್ಣ”ದ ಕಟ್ಟಡ ರಚನೆಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಕೈಗೊಳ್ಳುವ ಕ್ರಮ ವಹಿಸಲು ಸರ್ವಾನುಮತಿಯಿಂದ ತೀರ್ಮಾನಿಸಲಾಯಿತು.















ಮೀಟಿಂಗ್ ಹಾಲ್, ಅಧ್ಯಕ್ಷ ಉಪಾಧ್ಯಕ್ಷರ ಚೇಂಬರ್‌ಗಳಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಆಫೀಸಿನ ಒಳಗಿನಲ್ಲಿ ಮಾರ್ಪಾಡಿನ ಬಗ್ಗೆ ಚರ್ಚಿಸಲಾಯಿತು. ತೊಡಿಕಾನ ಗ್ರಾಮದಲ್ಲಿ ೨೪/೭ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಅದ್ಯಡ್ಕ ಶೀಘ್ರದಲ್ಲಿ ನೀರಿನ ಬಳಕೆದಾರರ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ರಸ್ತೆ, ದಾರಿ ದೀಪ ಮುಂತಾದ ಮೂಲಭೂತ ಸೌಕರ್ಯಗಳ ಬಗ್ಗೆ ಎಲ್ಲಾ ವಾರ್ಡ್‌ಗಳ ಪಂಚಾಯತ್ ಸದಸ್ಯಗಳು ಗಮನ ಸೆಳೆಯುವ ಚರ್ಚೆ ನಡೆಸಿದರು.

ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರು, ಸದಸ್ಯರುಗಳಾದ ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ಶಶಿಧರ ದೊಡ್ಡಕುಮೇರಿ, ಪುಷ್ಪಾಧರ ಕೊಡಂಕೇರಿ, ಸುಜಯ ಮೇಲಡ್ತಲೆ, ಶ್ವೇತಾ ಅರಮನೆಗಯ, ಮಾಲಿನಿ ಉಳುವಾರು, ಹರಿಣಿ ದೇರಾಜೆ, ಉಷಾ ಅಡ್ಯಡ್ಕ, ವಿನೋದ ತೊಡಿಕಾನ, ಸರಸ್ವತಿ ಬಿಳಿಯಾರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಂ. ಆರ್. ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಪಂಚಾಯತ್ ಹಾಗೂ ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು. ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಾದ ತನುಷ್, ಮಹಿಮಾ, ಜನನಿ ೩ ಜನ ವಿದ್ಯಾರ್ಥಿಗಳು ಅಧ್ಯಕ್ಷರ ಅನುಮತಿಯೊಂದಿಗೆ ವೀಕ್ಷಕರಾಗಿ ಹಾಜರಿದ್ದರು.










