ಪ್ರಕೃತಿಯಿಂದ ಪ್ರಯೋಜನ ಪಡೆದ ನಾವು ಪ್ರಕೃತಿಗೆ ಕೊಡುಗೆ ಕೊಡಬೇಕು: ಮಿತ್ರದೇವ ಮಡಪ್ಪಾಡಿ
ಪ್ರಕೃತಿಯಿಂದ ನಾವು ಅದೆಷ್ಟೂ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೇವೆ, ಅದಕ್ಕಾಗಿ ಒಂದಷ್ಟು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಕಾಡಿನ ಪ್ರಾಣಿಗಳಿಗೆ ಆಹಾರ ದೊರಕುವಂತಾಗಲಿ, ಇದು ಪುಣ್ಯದ ಕೆಲಸ ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಮಿತ್ರದೇವ ಮಾಡಪ್ಪಾಡಿ ರವರು ಹೇಳಿದರು. ಅವರು ಸೆ.18 ರಂದು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ.ಸಿ. ಟ್ರಸ್ಟ್ ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು, ಪ್ರಗತಿ ಬಂಧು ಸ್ವಸಾಯ ಸಂಘಗಳ ಒಕ್ಕೂಟ ಗಳ ಸದಸ್ಯರಿಂದ ಕಾಡಿನಲ್ಲಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
















ಇನ್ನೋರ್ವ ಅತಿಥಿಯಾಗಿ ತಾಲೂಕು ಜನಜಾಗೃತಿ ವೇದಿಕೆ ಸದಸ್ಯ,ಹಾಗೂ ಗುತ್ತಿಗಾರು ಗ್ರಾ. ಪಂ.ಸದಸ್ಯರಾದ ವಿಜಯಕುಮಾರ್ ಚಾರ್ಮಾತ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಅರಣ್ಯ ರಕ್ಷಕ ಬಸಪ್ಪರವರು ಉಪಸ್ತಿರಿದ್ದು ಶುಭಹಾರೈಸಿದರು.
ಒಕ್ಕೂಟಗಳ ಅಧ್ಯಕ್ಷರಾದ ಲೋಹಿತ್ ಚೇಮ್ನೂರು, ಕೇಶರಾಜ್ ಹೊಸೋಳಿಕೆ. ತಾಲೂಕು ಶೌರ್ಯ ಘಟಕದ ಕ್ಯಾಪ್ಟನ್ ಸತೀಶ್ ಬಂಬುಳಿ, ತಾಲೂಕು ಕೃಷಿ ಅಧಿಕಾರಿ ರಮೇಶ್, ಗುತ್ತಿಗಾರು ವಲಯ ಮೇಲ್ವಿಚಾರಕರಾದ ರಾಜೇಶ್.
ಒಕ್ಕೂಟಗಳ ಪದಾಧಿಕಾರಿಗಳು ಉಪಸ್ತಿತರಿದ್ದರು.
ಕಾರ್ಯಕ್ರಮದ ಬಳಿಕ ಕುಂಟುಮಾಯ ಅರಣ್ಯ ಪ್ರದೇಶದಲ್ಲಿ ನೇರಳೆ,ರಾಂಬೂಟನ್,ನೆಲ್ಲಿ, ಬಟರ್ ಫ್ರೂಟ್,ಮಾವು, ಹಲಸು, ಪುನರ್ಪುಳಿ,ಮುಂತಾದ 500 ಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡಲಾಯಿತು.
ನಾಲ್ಕೂರು ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.










