ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವತಿಯಿಂದ ನಡೆಸಲ್ಪಡುವ ಕೆ ಎಸ್ ಎಸ್ ಕಾಲೇಜ್ ನಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಬಿ .ಎಸ್ಸಿ ಪದವಿಯನ್ನು ಪ್ರಾರಂಭಿಸುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ನಾಯರ್ ಹಾಗೂ ಶಿಕ್ಷಕ ರಕ್ಷಕ ಸಂಘದ ನಿರ್ದೇಶಕ ಶಿವರಾಮ ರೈ ಯವರ ನೇತೃತ್ವದಲ್ಲಿ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಮುಜುರಾಯಿ ಆಯುಕ್ತ ವೆಂಕಟೇಶ್ ಅವರಿಗೆ ಸೆ.17 ರಂದು ಮನವಿ ಸಲ್ಲಿಸಲಾಯಿತು.
















ಇದಕ್ಕೆ ಸ್ಪಂದಿಸಿದ ಮುಜುರಾಯಿ ಸಚಿವರು ಹಾಗೂ ಆಯಕ್ತರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸುವ ಕುರಿತು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ ಕಳಿಗೆ, ಪವನ್ ಎಮ್ ಡಿ, ಪ್ರದೀಪ್ ಕಳಿಗೆ, ದಿನೇಶ್ ಮಲ್ಲಿಗೆಮಜಲು, ಅಶೋಕ್ ನೆಕ್ರಾಜೆ, ಡಾ. ರಘು, ಸತೀಶ್ ಕೂಜುಗೋಡು, ಶ್ರೀಮತಿ ಲೀಲಾಮನಮೋಹನ್, ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ಪ್ರವೀಣ ರೈ, ಕಿಶೋರ್ ಅರಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಮತ್ತಿತರರು ಉಪಸ್ಥಿತರಿದ್ದರು.










