ಸೆ. 22ರಿಂದ ಅ.1 ರವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ರಾತ್ರಿ ವಿಶೇಷ ಪೂಜೆ-ಭಜನಾ ಸೇವೆ
ಅ. 1ರಂದು ವಾಹನ ಪೂಜೆ, ಅ. 2ರಂದು ಹೊಸ ಅಕ್ಕಿ ಬಲಿವಾಡು ಕೂಟ















ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 22ರಿಂದ ಅ.1ರವರೆಗೆ ನವರಾತ್ರಿ ಉತ್ಸವವು ಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಅ. 2ರಂದು ಹೊಸ ಅಕ್ಕಿ ಬಲಿವಾಡು ಕೂಟ ನಡೆಯಲಿದೆ.
ಕ್ಷೇತ್ರವು ಜೀರ್ಣೋದ್ದಾರಗೊಳ್ಳುತ್ತಿರುವುದರಿಂದ ಶ್ರೀ ದೇವರಿಗೆ ಮಧ್ಯಾಹ್ನ ಯಾವುದೇ ಪೂಜೆ ಮತ್ತು ಸೇವೆಗಳು ನಡೆಯುವುದಿಲ್ಲ. ನವರಾತ್ರಿ ದಿನದ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಆ ಬಳಿಕ ಶ್ರೀ ದೇವಿಗೆ ವಿಶೇಷ ಪೂಜೆ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಜೀರ್ಣೋದ್ದಾರದ ಕೆಲಸ ಕಾರ್ಯಗಳು ನಡೆಯುತ್ತಿರುವುದರಿಂದ ಸ್ಥಳದ ಅಭಾವ ಇರುವ ಕಾರಣದಿಂದ ವಾಹನ ಪೂಜೆಯನ್ನು ಅ.1ರಂದು ಬೆಳಿಗ್ಗೆ ಯಿಂದ ರಾತ್ರಿ ತನಕ ಮಾಡಿಸಲು ಅವಕಾಶ ಇದ್ದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಪ್ರತಿ ಶುಕ್ರವಾರ ರಾತ್ರಿ ಭಜನಾ ಸೇವೆ ಮತ್ತು ಮಹಾಪೂಜೆ ನಡೆಯುತ್ತಿದೆ.
ನವರಾತ್ರಿ ಉತ್ಸವ ಸಂದರ್ಭದಲ್ಲಿ
ನವರಾತ್ರಿ ಪೂಜೆ, ಹೂವಿನ ಪೂಜೆ, ಸರ್ವ ಸೇವೆ, ಕುಂಕುಮಾರ್ಚನೆ, ಮಂಗಳಾರತಿ, ಅನ್ನ ಪ್ರಾಸನ, ವಾಹನ ಪೂಜೆ, ರಕ್ತೇಶ್ವರಿ ತಂಬಿಲ, ಅಕ್ಷರಭ್ಯಾಸ ಮಾಡಿಸಲು ಅವಕಾಶವಿದೆ.










