ಸೃಷ್ಠಿ ಪ್ಯಾನ್ಸಿಯಲ್ಲಿ ಐಫೋನ್ 17 & ಐಫೋನ್ 17 ಪ್ರೋ ಬಿಡುಗಡೆ ಹಾಗೂ ಗೌರವಾರ್ಪಣೆ

0

ಸುಳ್ಯದ ಶ್ರೀರಾಮ ಪೇಟೆಯ ಶ್ರೇಯಸ್ ಕಾಂಪ್ಲೆಕ್ಸ್‌ನಲ್ಲಿ ಪ್ರತಿಷ್ಠಿತ ಮೊಬೈಲ್ ಮಾರಾಟ ಮತ್ತು ಸರ್ವಿಸ್ ಮಳಿಗೆ ಸೃಷ್ಠಿ ಪ್ಯಾನ್ಸಿಯಲ್ಲಿ ಐಪೋನ್ ೧೭ ಮತ್ತು ಐಪೋನ್ ೧೭ ಪ್ರೋ ಬಿಡುಗಡೆ ಕಾರ್ಯಕ್ರಮ ಹಾಗೂ ಸುಳ್ಯ ಯುವ ಉದ್ಯಮಿ ಭಾರತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಹರಿರಾಯ ಕಾಮತ್ ಅರಂಬೂರುರವರನ್ನು ಅಭಿನಂದಿಸಿ ಗೌರವಿಸುವ ಕಾರ್ಯಕ್ರಮ ಸೃಷ್ಠಿ ಫ್ಯಾನ್ಸಿಯಲ್ಲಿ ನಡೆಯಿತು.


ಹೊಸ ಐಫೋನ್ ೧೭ ನ್ನು ಉದ್ಯಮಿ ಹರಿರಾಯ ಕಾಮತ್ ಯ್ಯೂಟೂಬರ್ ವಿಜೆ ವಿಖ್ಯಾತ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಉದ್ಯಮಿ ಪಾಸ್ಟ್‌ಟ್ರ್ಯಾಕ್ ಸುಳ್ಯ ಮಾಲಕ ಶೈಮು ಮೊದಲಾದವರು ಉಪಸ್ಥಿತರಿದ್ದರು.
ಸೃಷ್ಠಿ ಪ್ಯಾನ್ಸಿ ಮಾಲಕ ಶೈಲೇಂದ್ರ ಸರಳಾಯ ಸ್ವಾಗತಿಸಿ, ಐಫೋನ್೧೭ ರ ಬಗ್ಗೆ ಮಾಹಿತಿ ನೀಡಿದರು.