ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಹಿಂದಿ ವಿಭಾಗದ ವತಿಯಿಂದ 2025-26 ನೇ ಸಾಲಿನ “ಹಿಂದಿ ದಿವಸ್ ಸಮಾರೋಹ್” ಕಾರ್ಯಕ್ರಮವನ್ನು
ಸೆ.18ರಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಎನ್ ಪಿ ರವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಡಾ ದುರ್ಗಾರತ್ನ ಸಿ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು .















ವೇದಿಕೆಯಲ್ಲಿ ಕಾಲೇಜಿನ ಹಿಂದಿವಿಭಾಗದ ಮುಖ್ಯಸ್ಥರಾದ
ರಾಮಕೃಷ್ಣ ಕೆ ಎಸ್ ರವರು ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವೇದಿಕೆಯಲ್ಲಿ ಹಿಂದಿ ಸಂಘದ ಅಧ್ಯಕ್ಷ ಗೌತಮ್ ಎಂ ಬಿ ಹಾಗೂ ಕಾರ್ಯದರ್ಶಿ ವಕ್ಷಿತ ಎಚ್ ರವರು ಉಪಸ್ಥಿತರಿದ್ದರು.

ಕಳೆದ ವರುಷ ಕಾಲೇಜಿನಲ್ಲಿ ಹಿಂದಿ ವಿಭಾಗ ಹಾಗೂ ವಿಭಾಗ ಅಧ್ಯಕ್ಷರ ವತಿಯಿಂದ ನಡೆಸಿರುವ ‘ಉಚಿತ ‘ “ಸ್ಪೋಕನ್ ಹಿಂದಿ ಸರ್ಟಿಫಿಕೇಟ್ ಕೋರ್ಸ್” ನ ಪ್ರಮಾಣ ಪತ್ರಗಳನ್ನು , 2024 25 ನೇ ಸಾಲಿನ ಹಿಂದಿ ಭಾಷೆಯಲ್ಲಿ ಪ್ರತಿ ತರಗತಿಯ ಅತ್ಯಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉಡುಗೊರೆ ಗಳನ್ನು , ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ್ ವತಿಯಿಂದ ಆಯೋಜಿಸುವ ಹಿಂದಿ ಪರೀಕ್ಷೆಗಳನ್ನು ವಿಭಾಗ ಅಧ್ಯಕ್ಷರಾದ ರಾಮಕೃಷ್ಣ ಕೆ ಎಸ್ ರವರ ನೇತೃತ್ವದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದು ಅದರ ಅಂಕಪಟ್ಟಿಯ ವಿತರಣೆಯನ್ನು, ಹಾಗೆ ಹಿಂದಿ ದಿವಸದ ಪೂರ್ವಭಾವಿಯಾಗಿ ಅನೇಕ ಸ್ಪರ್ಧೆಗಳನ್ನು ಹಿಂದಿ ಹಾಗೂ ಕನ್ನಡ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದು ಅದರಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಗಳನ್ನು ಮಾಡಲಾಯಿತು. ಹಿಂದಿ ವಿಭಾಗದ ಮುಖ್ಯಸ್ಥರಾದ ರಾಮಕೃಷ್ಣ ಕೆ ಎಸ್ ಪ್ರಸ್ತಾವನೆ ಗೈದು ಸ್ವಾಗತಿಸಿದರು. ವಕ್ಷಿತಾ ವಂದಿಸಿದರು. ಪ್ರತೀಕ್ಷಾ ಮೋಕಾಶಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೈತ್ರಿ ಎನ್ ಹಾಗೂ ಕಾರ್ತಿಕ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಹಿಂದಿ ದಿವಸ್ ಕಾರ್ಯಕ್ರಮ ಪೂರ್ಣ ಗೊಂಡಿತು.










