ಬಳ್ಳ ಶ್ರೀ ತ್ರಿಶೂಲಿನೀ
ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವರಾತ್ರಿ ಸೆ. 22-ಅ. 2ರ ತನಕ ಶ್ರೀ ಕ್ಷೇತ್ರದ ತಂತ್ರಿಗಳಾದ ಶ್ರೀ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸೆ. 27ರಿಂದ ಅ. 02ರ ತನಕ ಬೆಳಿಗ್ಗೆ 7-30ಕ್ಕೆ ಪ್ರಾತಃಕಾಲ ಪೂಜೆ, ಬೆಳಿಗ್ಗೆ
10.30ರಿಂದ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಜೆ, ಹರಿವಾಣ ಪೂಜೆ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಸಂಜೆ
7.00ಕ್ಕೆ ನಿತ್ಯಪೂಜೆ, ಸಂಜೆ 7.30ರಿಂದ ಹೂವಿನ ಪೂಜೆ, ಹರಿವಾಣ ಪೂಜೆ, ಸಂಜೆ 8.30ಕ್ಕೆ ರಂಗಪೂಜೆ, ಪ್ರತಿದಿನ ಸಂಜೆ ಸಪ್ತಶತಿ ಪಾರಾಯಣ, ಲಲಿತಸಹಸ್ರನಾಮ ಪಾರಾಯಣ ನಡೆಯಲಿದೆ. ಸೆ. 25ರಂದು ಬೆಳಿಗ್ಗೆ ಕದಿರು ತುಂಬಿಸುವುದು,
ನವಾನ್ನ ನಡೆಯಲಿದೆ. ಸೆ. 26ರಂದು ಚಂಡಿಕಾಹೋಮ, ಸೆ. 27ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 9.30ರಿಂದ ಚಂಡಿಕಾ ಹೋಮ ನಡೆಯಲಿದೆ.
ಸೆ. 29ರಂದು ಸಂಜೆ 7.00ಕ್ಕೆ ಶ್ರೀ ಶಾರದಾ ಪೂಜಾರಂಭಗೊಳ್ಳಲಿದೆ.















ಅ. 01ರಂದು ಮಹಾನವಮಿ, ಬೆಳಿಗ್ಗೆ 11.00ಕ್ಕೆ ಆಯುಧ ಪೂಜೆ ನಡೆಯಲಿದೆ. ಅ. 02ರ ವಿಜಯದಶಮಿಯಂದು ಬೆಳಿಗ್ಗೆ 10.00ರಿಂದ ಶ್ರೀ ಮಹಾಗಣಪತಿಗೆ ಅಪ್ಪದ ಪೂಜೆ, ಶ್ರೀ ನಾಗದೇವರು, ದೈವಗಳಿಗೆ ತಂಬಿಲ ಮತ್ತು ವಿಷ್ಣುಮಂಗಲ ಶೀರಾಡಿ ರಾಜನ್ ದೈವಸ್ಥಾನದಲ್ಲಿ ತಂಬಿಲ ಸೇವೆ, ಮಧ್ಯಾಹ್ನ 11.00 ರಿಂದ ಅಕ್ಷರಾಭ್ಯಾಸ, ರಾತ್ರಿ 8.30ಕ್ಕೆ ರಂಗಪೂಜೆ (ಸಾಮೂಹಿಕ) ನಡೆಯಲಿದೆ.
ನವರಾತ್ರಿಯ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.










