ಐವರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸೆ.18 ರಂದು ಸಂಘದ ಅಧ್ಯಕ್ಷರಾದ ವಸಂತ ಕುಮಾರ್ ಭಟ್ ನಾಟಿಕೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಹಿರಿಯಣ್ಣ ಕೆ. ವರದಿ ಮಂಡಿಸಿದರು.
















ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಯಂತ ಗೌಡ ಬಿ. ಹಾಗೂ ನಿರ್ದೇಶಕರುಗಳಾದ ಶ್ರೀನಿವಾಸ ಮಡ್ತಿಲ, ಎಂ . ದಯಾನಂದ ಸಿ.ಎಸ್ , ಕೇಶವ ಜೆ, ನಾಗಪ್ಪ ಗೌಡ ಪಿ . ,ಪೊನ್ನಪ್ಪ ಪಿ., ಚಿದಾನಂದ ಕೆ ಶ್ರೀಮತಿ ಮಮತಾ ಎಂ ಎಸ್, ಶ್ರೀಮತಿ ರವಿಕಲಾ ಎನ್, ಶ್ರೀಮತಿ ರೇವತಿ ಬಿ ಹಾಗೂ ಮುಖ್ಯ ಅತಿಥಿಗಳಾಗಿ ಡಾ.ಕೇಶವ ಸುಳ್ಳಿ ಸಹಾಯಕ ವ್ಯವಸ್ಥಾಪಕರು ಸುಳ್ಯ ಶಿಬಿರ ಕಚೇರಿ ಹಾಲು ಒಕ್ಕೂಟ ಮತ್ತು ಹರೀಶ್ ಕುಮಾರ್ ಎಂ.ಎಸ್ ವಿಸ್ತರಣಾಧಿಕಾರಿ ದ.ಕ ಹಾಲು ಒಕ್ಕೂಟ ಇವರು ಉಪಸ್ಥಿತರಿದ್ದರು.
ಸಭೆಯಲ್ಲಿ ವಿಶೇಷವಾಗಿ ಸಂಘದ ಸದಸ್ಯರುಗಳ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಮತ್ತು ಪಿಯುಸಿಯಲ್ಲಿ ಶೇ .90ಕ್ಕಿಂತ ಹೆಚ್ಚು ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ವರದಿ ಸಾಲಿನಲ್ಲಿ ಹಾಲು ಹಾಕಿರುವ ಎಲ್ಲಾ ಸದಸ್ಯರುಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಸಭೆಯಲ್ಲಿ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










