ಜಾನ್ವಿ ಮತ್ತು ಅಸ್ಮಿ ರಿದಮಿಕ್ ಪ್ಯಾರ್ ಯೋಗಾಸನದಲ್ಲಿ ಜಿಲ್ಲಾಮಟ್ಟದಲ್ಲಿ ದ್ವಿತೀಯ

0

ಎಸ್.ಡಿ.ಎಂ.ವಾಮಂಜೂರು ಶಾಲೆ ‘ಮಂಗಳಜ್ಯೋತಿ ಸಮಗ್ರ ಮಂಗಳೂರು ಇಲ್ಲಿ ನಡೆದ 17 ರ ವಯೋಮಿತಿಯ ಬಾಲಕಿಯರ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ವಿದ್ಯಾರ್ಥಿಗಳಾದ ಜಾನ್ವಿ ಮಾಳ ಮತ್ತು ಆಸ್ಮಿ ಎಣ್ಮುರು ರಿದಮಿಕ್ ಪ್ಯಾರ್ ಯೋಗ ನೃತ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪ್ರಗತಿ ವಿದ್ಯಾಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಕೆ. ಕಳಂಜ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಇಬ್ಬರು ಕೂಡಾ ಬೆಳ್ಳಾರೆ ಡ್ಯಾನ್ಸ್ & ಬೀಟ್ಸ್ ನ ಹೆಮ್ಮೆಯ ವಿದ್ಯಾರ್ಥಿಗಳಾಗಿದ್ದು, ನೃತ್ಯ ನೃತ್ಯ ನಿರ್ದೇಶಕ ಜೀವನ್ ಟಿ. ಎನ್ ಬೆಳ್ಳಾರೆ ಇವರು ಸಂಯೋಜನೆಯಲ್ಲಿ ಸಹಕರಿಸಿದರು. ಅಸ್ಮಿಯವರು ಶ್ರೀ ಮಹಾವಿಷ್ಣು ಮಕ್ಕಳ ಯಕ್ಷಗಾನ ತಂಡ ಬಾಳಿಲ – ಮುಪ್ಪೇರ್ಯದ ಯಕ್ಷ ಗುರುಗಳಾದ ಲಕ್ಷ್ಮೀನಾರಾಯಣ ರೈ ಗುರಿಕ್ಕಾನ ಇವರ ಶಿಷ್ಯೆ.