ಸುಳ್ಯ ಯುವಜನ ಸಂಯುಕ್ತ ಮಂಡಳಿ ವಾರ್ಷಿಕ ಮಹಾಸಭೆ

0

ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅತ್ಯುತ್ತಮ ಯುವಕ ಮಂಡಲ – ಗಜಾನನ ಯುವತಿ ಮಂಡಲ ಬೊಮ್ಮಾರಿಗೆ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿ

ಸುಳ್ಯ ಯುವಜನ ಸಂಯುಕ್ತ ಮಂಡಳಿ ವಾರ್ಷಿಕ ಮಹಾಸಭೆಯು ಸೆ.20ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.

ಮಂಡಳಿಯ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು.

ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಮುಖ್ಯ ಅತಿಥಿಗಳಾಗಿದ್ದರು.

ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ ಮುತ್ಲಾಜೆ ನೂತನ ತಂಡಕ್ಕೆ ಪ್ರತಿಜ್ಞೆ ಬೋಧಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮಂಡಳಿಯ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ನಡೆಸಿಕೊಟ್ಟರು.

ನೂತನ ಅಧ್ಯಕ್ಷ ಪವನ್ ಪಲ್ಲತಡ್ಕ, ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್ ಬಾಳಿಕಳ ವೇದಿಕೆಯಲ್ಲಿದ್ದರು.

ಪ್ರಶಸ್ತಿ ಪ್ರದಾನ : 2024.25 ನೇ ಸಾಲಿನ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿಗೆ ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಡೆದುಕೊಂಡರೆ, ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿಗೆ ಗಜಾನನ ಯುವತಿ ಮಂಡಲ ಬೊಮ್ಮಾರು ಪಡೆದುಕೊಂಡಿತು. ಸಮಾರಂಭದಲ್ಲಿ ಈ ಎರಡೂ ತಂಡವನ್ನು ಗೌರವಿಸಲಾಯಿತು. ಸಮಾಜ ಸೇವಕರಾದ ಅಬ್ದುಲ್ ರಝಾಕ್ ರನ್ನು ಸನ್ಮಾನಿಸಲಾಯಿತು.

ಮಂಡಳಿಯ ಕಾರ್ಯದರ್ಶಿ ನಮಿತಾ ಹರ್ಲಡ್ಕ ವರದಿ ಮಂಡಿಸಿದರು. ಕೋಶಾಧಿಕಾರಿ ಸಂಜಯ ನೆಟ್ಟಾರು ಲೆಕ್ಕಪತ್ರ ಮಂಡಿಸಿದರು.
ನಿರ್ದೇಶಕ ವಿಜೇಶ್ ಹಿರಿಯಡ್ಕ ಸ್ವಾಗತಿಸಿದರು. ನಿತೀಶ್ ಎರ್ಮೆಟ್ಟಿ ಸನ್ಮಾನಿತರ ಪತ್ರವನ್ನು ವಾದಿಸಿದರು. ನಿರ್ದೇಶಕ ಪ್ರಸಾದ್ ಕಾಟೂರು ಕಾರ್ಯಕ್ರಮ ‌ನಿರೂಪಿಸಿದರು. ನೂತನ ಕಾರ್ಯದರ್ಶಿ
ಮುರಳಿ ನಳಿಯಾರು ವಂದಿಸಿದರು.