ಕೆ.ವಿ.ಜಿ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಘಟಕದ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಮತ್ತು ಮನೋರಂಜನಾ ಕಾರ್ಯಕ್ರಮ ಸೆ. 19 ರಂದು ಅಜ್ಜಾವರ ಕೊರಂಗುಬೈಲು ಗದ್ದೆಯಲ್ಲಿ ನಡೆಯಿತು. ಕಾಲೇಜಿನ ಪ್ರಾoಶುಪಾಲೆ ಶ್ರೀಮತಿ ಟೀನಾ ಎಚ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
















ರಾಷ್ಟ್ರೀಯ ಸೇವಾ ಘಟಕದ ಸಂಯೋಜಕಿ, ಉಪನ್ಯಾಸಕಿ ಶ್ರೀಮತಿ ನಯನ ಪಿ.ಯು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭನುಡಿಗಳನ್ನಾಡಿದರು. ಮುಖ್ಯ ಅಥಿತಿಗಳಾದ ಕೆವಿಜಿ ಕಾನೂನು ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ ದಾಮೋದರ ಗೌಡ ‘ಕೆಸರುಗದ್ದೆ ಆಟೋಟಗಳು ನಮ್ಮಗ್ರಾಮೀಣ ಸಂಸ್ಕೃತಿಯ ವೈಶಿಷ್ಟ್ಯವನ್ನು ಮರು ಜೀವಂತಗೊಳಿಸುವುದರ ಜೊತೆಗೆ ಉತ್ಸಾಹವನ್ನು ನೀಡುತ್ತದೆ ” ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮನಮೋಹನ ಮುಡೂರು, ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ದಿವ್ಯ ಜಯರಾಮ್ ಕಾರ್ಯಕ್ರಮಕ್ಕೆ
ಶುಭಹಾರೈಸಿದರು.

ವಿದ್ಯಾರ್ಥಿನಿಯರಾದ ಕು. ರಮ್ಯಾ ಕೆ.ಎಮ್ ಮತ್ತು ಕು. ಚಂದನ ಪಿ. ಪ್ರಾರ್ಥಿಸಿದರು.
ಕು. ಪ್ರಲೋಕ್ಷಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶ್ವೇತಲ್ ವಂದಿಸಿದರು.










