ಸರ್ವರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಕೊಡುವುದು ಅಶ್ರಫ್ ಕಮ್ಮಾಡಿ ಕನಸು
ಪುತ್ತೂರು ಹಿರಿಮೆಗೆ ಮತ್ತೊಂದು ಗರಿ ಅರೋಗ್ಯಕ್ಷೇತ್ರದಲ್ಲಿ ಪುತ್ತೂರು ಮತ್ತು ನೆರೆಯ ಸುಳ್ಯ ಹಾಗೂ ನೆರೆಯ ಪ್ರದೇಶದ ಜನರ ಸೇವೆಗಾಗಿ ಆರೋಗ್ಯ ಸೇವಾ ಕ್ಷೇತ್ರದಲ್ಲೂ ತನ್ನದೇ ಆದ ಹೆಗ್ಗುರುತು ಹೊಂದಿರುವ ಪುತ್ತೂರಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಸುಸಜ್ಜಿತ ‘ಮೆಡ್ ಲ್ಯಾಂಡ್’ ಸ್ಪೆಷಾಲಿಟಿ ಆಸ್ಪತ್ರೆ ಸೇರ್ಪಡೆಯಾಗಲಿದೆ.
ಪುತ್ತೂರು ಸಮೀಪದ ಸಂಪ್ಯದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಸಮಾರಂಭ ಸೆ.21ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು,
ಒ.ಟಿ. ವಿಭಾಗವನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಹಾಗೂ ಐವನ್ ಡಿ’ಸೋಜಾ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಸರಗೋಡು ದೇಲಂಪಾಡಿ ಜಿ.ಪಂ. ಸದಸ್ಯ ಮುಹಮ್ಮದ್ ಶಫೀಕ್, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಣ್ಣೂರು ಸೈ ಹಾಸ್ಪಿಟಲ್
ಸಮೂಹದ ಅಧ್ಯಕ್ಷ ಡಾ. ವಾಸುದೇವನ್ ಟಿ.ಪಿ., ಮಿಲನ್ ಪೈವುಡ್ ಸರಬರಾಜುದಾರರ ಬೆಂಗಳೂರು ಮಿಲಾಪ್ ಚಂದ್ ಜೈನ್, ಆರ್ಯಾಪು ಜಿಲ್ಲಾ ಅಧ್ಯಕ್ಷೆ ಗೀತಾ ಮತ್ತು ಇತರರು ಭಾಗವಹಿಸಲಿದ್ದಾರೆ ಎಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೆಡ್ ಲ್ಯಾಂಡ್ ಆಸ್ಪತ್ರೆಯ ಕಾನೂನು ಸಲಹೆಗಾರರು ನ್ಯಾಯವಾದಿ ಮೂಸ ಕುಂಞಿ ಪೈಂಬಚ್ಚಾಲ್ ತಿಳಿಸಿದರು.















ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ 100 ಬೆಡ್ ಗಳನ್ನು ಒಳಗೊಂಡಿರುವ ಆಸ್ಪತ್ರೆಯಾಗಿದ್ದು ಇಲ್ಲಿ ಶೀಘ್ರದಲ್ಲೇ 24 ಗಂಟೆಗಳ ತುರ್ತು ಚಿಕಿತ್ಸೆ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ, ಒಂದೇ ಸೂರಿನಡ ತಜ್ಞ ವೈದ್ಯರಿಂದ ಸಮಗ್ರ ವೈದ್ಯಕೀಯ ಸೇವೆ ಸಿಗಲಿದೆ. ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು
ಅಳವಡಿಸಿಕೊಳ್ಳಲಾಗಿದ್ದು, ಗುಣಮಟ್ಟದ ಸೇವೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ತಜ್ಞ ವೈದ್ಯರಾದ ಡಾ. ವಿಶಾಲ್ ಯು.ಪಿ.(ಜನರಲ್ ಮೆಡಿಸಿನ್), ಡಾ. ಸ್ವಾತಿ ಪಿ.(ಜನರಲ್ ಮೆಡಿಸಿನ್), ಡಾ. ನಂದಕಿಶೋರ್ (ಆರ್ಥೋಪೆಡಿಕ್ಸ್),ಡಾ. ಅದ್ರಾಮ ಇಬ್ರಾಹಿಂ (ಪೆಡಿಯಾಟಿಕ್ಸ್), ಡಾ. ಪ್ರಸಾದ್ ನಾಯಕ್ (ಪೆಡಿಯಾಟ್ರಕ್ಸ್), ಡಾ. ಪ್ರದೀಪ್ ಹ ಶೆಣೈ(ನೆಪ್ರೊಲಾಜಿಸ್ಟ್), তেন. ಅವಿನಾಶ್ (ಯುರೊಲಾಜಿಸ್ಟ್), ಡಾ. ರಂಜಿತ್ (ಜನರಲ್ ಸರ್ಜನ್ ರವರು ಸೇವೆಗೆ ಲಭ್ಯರಿರುತ್ತಾರೆ.
ಹೃದಯ, ಕಿಡ್ನಿ, ಲಿವರ್‌ಗೆ ಸಂಬಂಧಿಸಿದ ಎಲ್ಲಾ ತರಹದ ರಕ್ತ ಪರೀಕ್ಷೆಗಳು ಹಾಗೂ
24 ಗಂಟೆ ಸೇವೆಯ ಔಷಧಿ ದೊರೆಯುತ್ತದೆ
ಎಸಿ ಆಂಬುಲೆನ್ಸ್ ಸೇವೆಯು ಲಭ್ಯವಿದೆ ಎಂದವರು ಹೇಳಿದರು
ಕಂಪ್ಯೂಟರೀಕೃತ ಪ್ರಯೋಗಾಲಯ,ಉಪಹಾರ ಗೃಹದ ಸೌಲಭ್ಯಗಳನ್ನು ಒಳಗೊಂಡಿದೆ.
ಜನರಲ್ ವಾರ್ಡ್, ಸ್ಪೆಷಲ್ ರೂಮ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ
ಸಂದರ್ಶಕ ತಜ್ಞ ವೈದ್ಯರಿಂದ ತ್ವರಿತ ಸೇವೆ ಹಾಗೂನುರಿತ ಸಿಬ್ಬಂದಿಗಳಿಂದ ಸದಾ ಸೇವೆಗೆ ಸಜ್ಜಾಗಿದೆ ಎಂದವರು ಹೇಳಿದರು
ಎಂಡೋಸ್ಕೋಪಿ, ಫಿಸಿಯೋಥೆರಪಿ,
ಅಲ್ಟಾ ఆలా ಸೌಂಡ್ ಸ್ಕ್ಯಾನ್, ಸಿಟಿ ಸ್ಕ್ಯಾನ್,
ಇಸಿಜಿ, ಡಯಾಲಿಸಿಸ್,ಡಿಜಿಟಲ್ ಎಕ್ಸರೇ,ಎಮರ್ಜೆನ್ಸಿ ಸರ್ವಿಸಸ್
ಸೇವೆಗಳನ್ನು ಒಳಗೊಂಡಿದೆ.
(ಜನರಲ್ ಸರ್ಜನ್), ಡಾ. ಯೋಗೀಶ್ * ಸರ್ಜನ್), ಡಾ. ಸುಜನ್ ಶೆಟ್ಟಿ(ಡ್ಯೂಟಿ ಡಾಕ್ಟರ್), ಡಾ. ಅನೀಶ್, “ಕಾರ್ಡಿಯಾಲಾಜಿಸ್ಟ್ ವೈದ್ಯರಾದ’ ಡಾ. ಪ್ರವೀಣ್ ಶೆಟ್ಟಿ, ಡಾ. ವಿಶು ಕುಮಾರ್ ಆಸ್ಪತ್ರೆಯಲ್ಲಿ ಲಭ್ಯವಾಗಲಿದ್ದಾರೆ.
100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 24 ಗಂಟೆ ತುರ್ತು ಚಿಕಿತ್ಸೆಯೊಂದಿಗೆ ಎಲ್ಲ ರೀತಿಯ ಅರೋಗ್ಯ ಸೇವೆಯನ್ನು ಸ್ಥಳಿಯವಾಗಿ ಸಿಗುವಂತೆ ಮಾಡವುದು ಆಶ್ರಫ್ ಕಮ್ಮಾಡಿಯವರ ಕನಸಾಗಿದೆ ಎಂದವರು ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್,ಸುಳ್ಯ ಸರಕಾರಿ ಅಸ್ಪತ್ರೆ ಅರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ,ಟಿ.ಎಮ್ ಆರೀಪ್ ಪೇರಡ್ಕ ಉಪಸ್ಥಿತರಿದ್ದರು..










