ದಿನಂಪ್ರತಿ ಭಜನೆ, ವೈವಿಧ್ಯಮಯ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೊಳಪಟ್ಟ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ
ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಉತ್ಸವ ಸೆ. 22 ರಿಂದ ಅ. 01ರ ವರೆಗೆ ನಡೆಯಲಿದ್ದು ದಿನಂಪ್ರತಿ ಭಜನಾ ಕಾರ್ಯಕ್ರಮ, ವೈವಿಧ್ಯಮಯ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.















ಸೆ.22 ರ ಸಂಜೆ 4.00 ರಿಂದ ಕುಕ್ಕೆಶ್ರೀ ದೇವಾಲಯದ ನೌಕರ ವೃಂದದಿಂದ ಭಜನೆ ನಡೆಯಲಿದೆ. ಬಳಿಕ ಡ್ಯಾನ್ಸ್ & ಬೀಟ್ಸ್ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ. ಸೆ. 23 ರ ಸಂಜೆ ಶಿವ ಸ್ಕಂದ ಭಜನಾಮೃತ ತಂಡ ಸುಬ್ರಹ್ಮಣ್ಯ ತಂಡದಿಂದ ಭಜನೆ, ಬಳಿಕ ರಾತ್ರಿ ಸಾಯಿಕಲಾ ಯಕ್ಷ ಬಳಗ ಡಾl ಶಿವರಾಮ ಕಾರಂತ ಬಾಲವನ ಪುತ್ತೂರು ಇವರಿಂದ ಯಕ್ಷಗಾನ” ಕದಂಬ ಕೌಶಿಕೆ ನಡೆಯಲಿದೆ. ಸೆ. 24 ರ ಸಂಜೆ ಶ್ರೀ ಹರಿಹರೇಶ್ವರ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಬಳಿಕ ಕ್ರೀಮ್ ರೋನ್ ಡಾನ್ಸ್ ಕ್ರಿವ್ ಬೆಳ್ತಂಗಡಿ ಇವರಿಂದ ನೃತ್ಯ ನೂತನ ನಡೆಯಲಿದೆ. ಸೆ. 25 ರ ಸಂಜೆ ಶ್ರೀ ವಲ್ಲಿ ಭಜನಾ ಮಂಡಳಿ ಸುಬ್ರಹ್ಮಣ ವತಿಯಿಂದ ಭಜನೆ, ಬಳಿಕ ರಾತ್ರಿ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ಇವರು ಪ್ರಸ್ತುತ ಪಡಿಸುವ ಯಕ್ಷಗಾನ ನೂತನ ಪ್ರಸಂಗ ನಡೆಯಲಿದೆ. ಸೆ.26 ರ ಸಂಹೆ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಹಾಲೆಮಜಲು ಇವರಿಂದ ಭಜನೆ ನಡೆದು ಬಳಿಕ ಅಮ್ಮ ಡ್ರಮ್ಸ್ ಮೆಲೊಡೀಸ್ ಅಂಬಲಪಾಡಿ ಉಡುಪಿ ಇವರಿಂದ “ಭಕ್ತಿ ಗೀತಾ ಗಾಯನ” ನಡೆಯಲಿದೆ. ಸೆ. 27 ಸಂಜೆ ಗಂಟೆ 4.00 ರಿಂದ ಶ್ರೀ ಷಣ್ಮುಖ ಕುಣಿತ ಭಜನಾ ತಂಡ ಶಾರದಗುಡ್ಡೆ, ಏನೆಕಲ್ಲು ಭಜನೆ ನಡೆದು ಬಳಿಕ ಕವಿತಾ ಉಮೇಶ್ ಈಶ ಕಲಾ ಪ್ರತಿಷ್ಠಾನ ಬೆಳಾಲು ವಿದ್ಯಾರ್ಥಿಗಳಿಂದ ವಿನೂತನ “ನೃತ್ಯ ವೈಭವ” ನಡೆಯಲಿದೆ. ಸೆ. 28ರ ಸಂಜೆ ವಿದ್ಯಾಸಾಗರ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನೆ, ಬಳಿಕ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇವರ ಸುಬ್ರಹ್ಮಣ್ಯ ಶಾಖೆ ಪ್ರಸ್ತುತಪಡಿವಸುವ “ನೃತ್ಯೋಹಂ” ನಡೆಯಲಿದೆ. ಸೆ. 29 ರ ಸಂಜೆ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮರಕತ ಇವರಿಂದ ಭಜನೆ, ಬಳಿಕ ದಯಾಪದ ಕಲಾವಿದೆರ್ ಉಬರ್ ಅಭಿನಯಿಸುವ “ನಾಗ ಮಾಣಿಕ್ಯ” ನಾಟಕ ನಡೆಯಲಿದೆ. ಸೆ. 30 ರ ಸಂಜೆ ಸುಖಪ್ರಧಾ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನೆ ನಡೆದು ಯಜ್ಞೇಶ್ ಆಚಾರ್ ಮತ್ತು ಬಳಗದ ಇವರಿಂದ “ಭಕ್ತಿ ಸಂಗೀತ” ನಡೆಯಲಿದೆ. ಅ.1ರ ಸಂಜೆ 4.00 ರಿಂದ ನಾಗ ಶ್ರೀ ಭಜನಾ ತಂಡ ಸುಬ್ರಹ್ಮಣ್ಯ ಇವರಿಂದ ಭಜನೆ, ಬಳಿಕ ಬಡಗುತಿಟ್ಟಿನ ಹೆಸರಾಂತ ಕಲಾವಿದರಿಂದ “ಹಾಸ್ಯ ಸಂಗಮ” ನಡೆಯಲಿದೆ. ಕಾರ್ಯಕ್ರಮಗಳಿರುವ ಒಂಬತ್ತು ದಿನವು ಪ್ರತಿದಿನ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.










