
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯದ ಪಂಜ ವಲಯ, ಆರೋಗ್ಯ ಇಲಾಖೆ ಮತ್ತು ಮಂಜುಶ್ರೀ ಸ್ತ್ರೀ ಶಕ್ತಿ ಸಂಘಗಳ ಗೊಂಚಲು ಸಮಿತಿಯ ಸಹಕಾರದಲ್ಲಿ ಬಾಳಿಲದಲ್ಲಿ
ಪೌಷ್ಟಿಕಾಹಾರ ಸಪ್ತಾಹ ಹಾಗೂ ಉಚಿತ ವೈದ್ಯಕೀಯ ತಪಾಸಣೆ ಸೆ. 20ರಂದು ನಡೆಸಲಾಯಿತು.
















ಬಾಳಿಲ ಗ್ರಾಮಪಂಚಾಯತ್ ಸದಸ್ಯೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ಶಿಶು ಅಭಿವೃದ್ಧಿ ಇಲಾಖೆ ಪಂಜ ವಲಯಗಳ ಮೇಲ್ವಿಚಾರಕಿ ರವಿಶ್ರೀ ಕೆ ,ಬಾಳಿಲ ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಮುಪ್ಪೇರ್ಯದ ಸಮುದಾಯ ಆರೋಗ್ಯಾಧಿಕಾರಿ ಸಿನಿ , ಬಾಳಿಲ ಅಂಗನವಾಡಿ ಕಾರ್ಯಕರ್ತೆ ದಯಾನಂದಿನಿ, ಇಂದ್ರಾಜೆ ಅಂಗನವಾಡಿ ಕಾರ್ಯಕರ್ತೆ ಪದ್ಮಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೀನಾಕ್ಷಿ ಮುಪ್ಪೇರ್ಯ ಸಭಾದ್ಯಕ್ಷತೆಯನ್ನು ವಹಿಸಿದ್ದರು. ಬಾಳಿಲ ಸಮುದಾಯ ಆರೋಗ್ಯಾಧಿಕಾರಿ ಜ್ಯೋತಿ ಆರೋಗ್ಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯಶೋಧ ಇಂದ್ರಾಜೆ ಹಾಗು ಸುಶೀಲಾ ಜಯರಾಮ ಇವರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.
ಇಬ್ಬರು ಪುಟಾಣಿಗಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಲಾಯಿತು. ವನಜಾ ವಸಂತ ದಂಪತಿಯ ಮಗು ಯಶ್ವತ್ ಡಿ.ವಿ ಹಾಗು ಬಾಳಿಲ ಸಿ.ಹಚ್.ಓ ಜ್ಯೋತಿ ಇವರ ಮಗು ದ್ರೋಣ ದೀಪ್ ಗೆ ಅನ್ನಪ್ರಾಶನ ನೆರವೇರಿಸಲಾಯಿತು.
ಪೋಷಕರು, ಮಂಜುಶ್ರೀ ಗೊಂಚಲು ಸಮಿತಿಯ ಸದಸ್ಯರು ಸುಮಾರು 26 ಬಗೆಯ ಪೌಷ್ಟಿಕಾಹಾರಗಳನ್ನು ತಯಾರಿಸಿದ್ದರು. ನಂತರ ಬಹುಮಾನ ವಿತರಿಸಲಾಯಿತು.
ಸಂಧ್ಯಾ ಭಟ್ ಪ್ರಾರ್ಥಿಸಿದರು.
ಭುವನೇಶ್ವರಿ ಸ್ವಾಗತಿಸಿ, ಸರಿತಾ ಕಂಡಿಕಟ್ಟ ವಂದಿಸಿದರು. ದಯಾನಂದಿನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.










