ನಳಿಯಾರು ಭಾಸ್ಕರ ಗೌಡ ಮುರುಳ್ಯರಿಗೆ ನುಡಿನಮನ

0

ಪರೋಪಕಾರಿಯಾಗಿ ಸಮಾಜಕ್ಕೆ ಮಾದರಿ ವ್ಯಕ್ತಿ ಭಾಸ್ಕರ ಗೌಡ – ಡಾ‌. ಎನ್.ಎ. ಜ್ಞಾನೇಶ್

” ಧಾರ್ಮಿಕ, ಸಾಮಾಜಿಕ‌ ಮುಂದಾಳುವಾಗಿ, ಕೊಡುಗೈ ದಾನಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಮುರುಳ್ಯ ಭಾಸ್ಕರ ಗೌಡರು ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜಕ್ಕೆ ಮಾದರಿಯಾಗಿ ಬಾಳಿದವರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು” ಎಂದು ರಾಜ್ಯ ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಎನ್.ಎ.ಜ್ಞಾನೇಶ್ ಹೇಳಿದರು. ಅವರು ಸೆ. 20ರಂದು ನಳಿಯಾರುನಲ್ಲಿ ನಡೆದ ಭಾಸ್ಕರ ಗೌಡ ಮುರುಳ್ಯರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸುತ್ತಾ ಮಾತನಾಡಿದರು. ನಾವೂರು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪಕರಾದ ಎನ್.ಟಿ.ರವಿಶಂಕರ್ ಮಾತನಾಡಿ ” ವ್ಯಕ್ತಿ ಅಳಿದ ಮೇಲೂ ಕೀರ್ತಿ ಉಳಿಯಬೇಕಾದರೆ ಜೀವಿತಾವಧಿಯಲ್ಲಿ ಪರೋಪಕಾರಿಯಾಗಿ ಬಾಳಬೇಕು. ಭಾಸ್ಕರ ಗೌಡರು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದರು” ಎಂದರು.
ಶಶಿಧರ ಪಳಂಗಾಯ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮೃತರ ಪುತ್ರ ಮುರುಳ್ಯ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಶಾಂತ್ ಮುರುಳ್ಯ, ಸೊಸೆ ಶ್ರೀಮತಿ ರಮ್ಯ ಪ್ರಶಾಂತ್, ಸಹೋದರರಾದ ವಿಜಯಾ ಬ್ಯಾಂಕ್‌ ನಿವೃತ್ತ ಉದ್ಯೋಗಿ ಎಂ.ಎಲ್.ಚಂದ್ರಶೇಖರ, ಕೃಷಿಕ ಬಾಲಕೃಷ್ಣ ಎಂ.ಎಲ್. ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಅಭಿಮಾನಿಗಳು,
ಬಂಧು ಮಿತ್ರರು ಸಭೆಯಲ್ಲಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ತಂಗುದಾಣ ನಿರ್ಮಿಸಿಕೊಟ್ಟ ನೆನಪಿಗೆ ರಿಕ್ಷಾ ಚಾಲಕರಿಂದ ಬಾಡಿಗೆ ರಹಿತ ಸೇವೆ

ಪುಣ್ಚತ್ತಾರಿನಲ್ಲಿ ಸುಮಾರು 1.70 ಲಕ್ಷ ವೆಚ್ಚದಲ್ಲಿ ರಿಕ್ಷಾ ತಂಗುದಾನವನ್ನು ಕೊಡುಗೆಯಾಗಿ ನೀಡಿದ ಭಾಸ್ಕರ ಗೌಡರ ಸಮಾಜ ಸೇವೆಗಾಗಿ ಪುನ್ಚತ್ತಾರು ಅಟೋ ಸ್ಟಾಂಡ್ ನ ರಿಕ್ಷಾ ಚಾಲಕ ಮಾಲಕರು ವೈಕುಂಠ ಸಮಾರಾಧನೆಗೆ ತೆರಳುವ ಸಾರ್ವಜನಿಕರಿಗೆ ಬಾಡಿಗೆ ರಹಿತ ಸೇವೆಯನ್ನು ನೀಡಿ ವಿಶೇಷ ಗೌರವ ಸಲ್ಲಿಸಿದರು.