ಜಾತಿ ಸಮೀಕ್ಷೆಯಲ್ಲಿ ಮೊಗೇರ ಎಂದೇ ದಾಖಲಿಸಲು ನಿರ್ಧಾರ
ನಕಲಿ ಜಾತಿ ಸರ್ಟಿಫಿಕೇಟ್ ಬಗ್ಗೆ ಗಂಭೀರ ಚರ್ಚೆ
ವರ್ಷಾoತ್ಯದಲ್ಲಿ ಸುಳ್ಯದಲ್ಲಿ ಸಮಾವೇಶ ನಡೆಸಲು ತೀರ್ಮಾನ

ಕರ್ನಾಟಕ ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಸುಳ್ಯ ತಾಲೂಕು ಸಮಿತಿ ನೇತೃತ್ವದಲ್ಲಿ ಸೆ. 21 ರಂದು ಸುಳ್ಯ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ರಾಜ್ಯ ಅಧ್ಯಕ್ಷ ನಂದರಾಜ್ ಸಂಕೇಶ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಒಳಮೀಸಲಾತಿ, ನಕಲಿ ಜಾತಿ ಸರ್ಟಿಫಿಕೇಟ್ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಒಳ ಮೀಸಲಾತಿಯಲ್ಲಿ ಶೇ. 1 ರಿಂದ ಶೇ. 6 ಕ್ಕೆ ಮೊಗೇರ ಸಮುದಾಯವನ್ನು ಸೇರ್ಪಡೆ ಮಾಡಲಾಗಿದ್ದು, ಇದಕ್ಕೆ ಸಮುದಾಯದ ನಾಯಕರ ಹೋರಾಟದ ಬಗ್ಗೆ ವಿಮರ್ಶೆ ನಡೆಯಿತು.

ಉತ್ತರ ಕನ್ನಡ, ಕಾರವಾರ ಮತ್ತಿತರ ಜಿಲ್ಲೆಯಲ್ಲಿರುವ ಮೊಗವೀರ ಸಮುದಾಯದವರು ಮೊಗೇರ ಜನಾಂಗದ ನಕಲಿ ಜಾತಿ ಸರ್ಟಿಫಿಕೇಟ್ ಬಳಸಿ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮೊಗೇರ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಸಮುದಾಯದ ನಾಯಕರು ಮಾಡುತ್ತಿರುವ ಹೋರಾಟ, ಆಗಿರುವ ವ್ಯವಸ್ಥೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ನಕಲಿ ಜಾತಿ ಸರ್ಟಿಫಿಕೇಟ್ ಕುರಿತು ಕಾನೂನು ಹೋರಾಟಕ್ಕೆ ಸಮುದಾಯದ ಎಲ್ಲರೂ ಸಹಕರಿಸುವಂತೆ ನಂದರಾಜ್ ಸಂಕೇಶ ಕೇಳಿಕೊಂಡರು.















ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಜಾತಿ ಸಮೀಕ್ಷೆ ಯಲ್ಲಿ ಸಮುದಾಯದ ಎಲ್ಲರೂ ಮೊಗೇರ ಎಂದು ದಾಖಲಿಸಲು ಸಭೆಯಲ್ಲಿ ನಿರ್ಧಾರಿಸಲಾಯಿತು.
ಮೊಬೈಲ್ ಆಪ್ ಮೂಲಕ ಮೊಗೇರ ಜನಾಂಗದ ಸಮೀಕ್ಷೆ ನಡೆಸುವ ಕುರಿತು ಮಾಹಿತಿ ನೀಡಲಾಯಿತು.
ಸಭೆಯಲ್ಲಿ ರಾಜ್ಯ ಸಂಘದ ಮುಖಂಡರಾದ ಸುಂದರ ಮೇರ ಮಂಗಳೂರು, ಜಿಲ್ಲಾಧ್ಯಕ್ಷ ತುಳಶೀದಾಸ್, ರಾಮ ಕೊಳಂಬೆ, ಸೀತಾರಾಮ್ ಮಂಗಳೂರು, ಶರತ್ ಕೆ. ಸಿ, ಜೀವನ್ ಪ್ರಕಾಶ್, ಕೊರಗಪ್ಪ ಪುತ್ತೂರು, ಮುಖೇಶ್ ಪುತ್ತೂರು, ಎಸ್. ಗಿರಿಯಪ್ಪ, ಸದಾನಂದ ಉಳ್ಳಾಲ, ಹರಿದಾಸ್ ಕೂಳೂರು, ರಾಘವ ಕೆ, ಸುಂದರ ಕೆ ಪುತ್ತೂರು, ವಸಂತ ಸೋಮವಾರಪೇಟೆ, ಶೇಖರ ಮಾಡವು, ರೋಹಿಣಿ ಬಿ, ಸುನೀತಾ ಅಂಡಾರ್, ಮಾಯಿಲಪ್ಪ ಮಾಸ್ತರ್, ಸುಂದರ ಬೆಲ್ಮಣ್ಣು, ಶಶಿಧರ ಬೊಟ್ಟಡ್ಕ, ಅಶೋಕ ಕೊಂಚಾಡಿ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಳಂಜ, ಗೌರವಾಧ್ಯಕ್ಷ ಕೇಶವ ಮಾಸ್ತರ್ ಹೊಸಗದ್ದೆ, ದಕ್ಷಿಣ ಕನ್ನಡ, ಕೊಡಗು,ಕೋಶಾಧಿಕಾರಿ ಮೋಹನ್ ನಕ್ರೆ, ಉಪ ತಹಸೀಲ್ದಾರ್ ರಾಮ ಕಾಟಿಪಳ್ಳ, ಹಾಸನ, ಉಡುಪಿ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಎಲ್ಲಾ ಜಿಲ್ಲೆಯ ಪ್ರತಿ ತಾಲೂಕಿನ ಮೊಗೇರ ಸಮಿತಿಯ ಮುಖಂಡರು ಹಾಜರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಚಿತ್ತಾರಂಜನ್ ದಾಸ್ ಸಭಾ ನಡಾವಳಿ ನಡೆಸಿಕೊಟ್ಟರು.










