ಮಂಗಳೂರು ಕೃಷಿಕರ ಸಹಕಾರಿ ಸಂಘದ ಮಹಾಸಭೆ, 195 ಕೋಟಿಯ ವ್ಯಾಪಾರ ನಡೆಸಿ 25.40 ಲಕ್ಷ ಲಾಭ

0

ಮಂಗಳೂರು ಕೃಷಿಕರ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 20 ರಂದು ಬೈಕಂಪಾಡಿಯ ಎ.ಪಿ.ಎಂ.ಸಿ ಆವರಣದಲ್ಲಿರುವ ಕೇಂದ್ರ ಕಚೇರಿಯಲ್ಲಿ ಜರುಗಿತು.

ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಪ್ರದೀಪ್ ಯಡಿಯಾಳ ಹಾಗೂ ಆಡಳಿತ ಮಂಡಳಿ ನಿರ್ದೇಶಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಸ್ತುತ ಸಾಲಿನಲ್ಲಿ ಸಂಘವು ಒಟ್ಟು 195 ಕೋಟಿಯ ವ್ಯಾಪಾರ ನಡೆಸಿ 25.40 ಲಕ್ಷ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ. 6ರ ಡಿವಿಡೆಂಡ್ ಹಂಚಿಕೆ ಮಾಡುವುದು ಎಂದು ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಘೋಷಿಸಿದರು.

ಸಭೆಯಲ್ಲಿ 2024-25ನೇ ಸಾಲಿನ ಪ್ರಗತಿ ವರದಿ, ಲೆಕ್ಕಪರಿಶೋಧನಾ ವಿವರಗಳನ್ನು ಮಂಡಿಸಿ, ಮುಂದಿನ ಯೋಜನೆಗಳ ಕುರಿತು ಚರ್ಚೆ ನಡೆಯಿತು. ಅದೇ ಸಂದರ್ಭದಲ್ಲಿ ಹೆಚ್ಚಿನ ವ್ಯಾಪಾರ ಮಾಡಿದ ಶಾಖೆಗಳನ್ನು ಕಚೇರಿಗಳಿಗೆ ಸನ್ಮಾನ ಸಲ್ಲಿಸಲಾಯಿತು.