ನಾರಾಯಣ ಮೂಲೆಗದ್ದೆ ನಿಧನ

0

ಬಾಳುಗೋಡು ಗ್ರಾಮದ ಮೂಲೆಗದ್ದೆ ನಿವಾಸಿ ಕೆ. ಎಂ. ನಾರಾಯಣ ಇವರು ಸೆ. 21 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ನಾಟಿವೈದ್ಯರೂ, ಮಂತ್ರವಾದಿಗಳೂ ಆಗಿದ್ದ ನಾರಾಯಣರು ಕೆಂಪು ಹಾಗೂ ಇನ್ನಿತರ ಖಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾ ಸ್ಥಳೀಯವಾಗಿ ಜನಪ್ರಿಯರಾಗಿದ್ದರು. ಮೃತರು ಪುತ್ರರಾದ ನವೀನ್ ಕುಮಾರ್, ವಿಜಯಕುಮಾರ್, ಪುತ್ರಿಯರಾದ ಪ್ರಮೀಳಾ ಪ್ರಕಾಶ್, ನಿಶಿತಾ ಜತ್ತಪ್ಪ ಹಾಗೂ ಸುವರ್ಣ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.