ಡಿಸೆಂಬರ್ ನಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣ ಎಂದು ಶಾಸಕರು ಹೇಳಿದ್ದಾರೆ : ಮುಂದಿನ ಬಾರೀ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ದಿನಾಚರಣೆ ಮಾಡುವಂತೆ ಒತ್ತಾಯ

0

10 ತಿಂಗಳ ಬಳಿಕ ಸಭೆ ಆಯೋಜನೆಗೆ ಮುಖಂಡರ ಅಸಮಾಧಾನ

ಸುಳ್ಯದಲ್ಲಿ ಎಸ್ಸಿ-ಎಸ್ಟಿ ಕುಂದು‌ ಕೊರತೆ ನಿವಾರಣಾ ಸಭೆ

ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಮುಂದಿನ ಡಿಸೆಂಬರ್ ನಲ್ಲಿ ಪೂರ್ಣ ಮಾಡುತ್ತೇವೆ ಎಂದು ಶಾಸಕರು ಹೇಳಿದ್ದಾರೆ. ಆದರೆ ಈಗ ಅಲ್ಲಿ‌ಕೆಲಸವೇ ಆಗುತ್ತಿಲ್ಲ. ಮುಂದಿನ ಅಂಬೇಡ್ಕರ್ ದಿನಾಚರಣೆ ಯನ್ನು ಇದೇ ಭವನದಲ್ಲಿ ಮಾಡಬೇಕು” ಎಂದು ದಲಿತ ಮುಖಂಡರು ಒತ್ತಾಯಿಸಿದ ಘಟನೆ ವರದಿಯಾಗಿದೆ.

ತಹಶೀಲ್ದಾರ್ ‌ಮಂಜುಳಾ ಸಭೆಯ ಅಧ್ಯಕ್ಷತೆ ‌ವಹಿಸಿದ್ದರು. ಇ.ಒ.‌ರಾಜಣ್ಣ, ಸರ್ಕಲ್ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಸಮಾಜಕಲ್ಯಾಣ ಅಧಿಕಾರಿ ಕೃಷ್ಣ ಹಾಗೂ ತಾಲೂಕಿನ ಅಧಿಕಾರಿಗಳು ಸಭೆಯಲ್ಲಿದ್ದರು.

10 ತಿಂಗಳ ಬಳಿಕ ಕುಂದು ಕೊರತೆ ನಿವಾರಣಾ ಸಭೆ ನಡೆಸಿರುವುದಕ್ಕೂ ಅಸಮಾಧಾನ ವ್ಯಕ್ತವಾಯಿತು.