ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ನರ್ಸಿಂಗ್ ಸೈನ್ಸಸ್ ಸಹಯೋಗದಲ್ಲಿ ಪೌಷ್ಠಿಕ ಆಹಾರ ಜಾಗೃತಿ ಕಾರ್ಯಕ್ರಮ

0

“ಆರೋಗ್ಯಕರ ಸಮಾಜಕ್ಕೆ ಪೌಷ್ಠಿಕ ಆಹಾರವೇ ಮೂಲ” ಎನ್ನುವ ನಿಟ್ಟಿನಲ್ಲಿ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ನರ್ಸಿಂಗ್ ಸೈನ್ಸಸ್ ಸಹಯೋಗದಲ್ಲಿ ಪೌಷ್ಠಿಕ ಆಹಾರ ಜಾಗೃತಿ ಕಾರ್ಯಕ್ರಮ ಸೆ. 22ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಒಎಲ್ಇ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ “ಪೌಷ್ಠಿಕ ಆಹಾರ ಸೇವನೆ ಆರೋಗ್ಯದ ಅಡಿಪಾಯ. ಸಮತೋಲನ ಆಹಾರ ಪದ್ಧತಿ ಅನುಸರಿಸಿದರೆ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು. ವಿಶೇಷವಾಗಿ ಮಕ್ಕಳಿಗೆ, ತಾಯಂದಿರಿಗೆ ಹಾಗೂ ಯುವಜನತೆಗೆ ಪೌಷ್ಠಿಕತೆಯ ಅರಿವು ಅತ್ಯಗತ್ಯ” ಎಂದರು.


ವೇದಿಕೆಯಲ್ಲಿ ಎಒಎಲ್ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ ಪ್ರಾಂಶುಪಾಲೆ ಡಾ. ಪ್ರಮೋದ್ ಕೆ. ಜೆ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಪ್ರಾಂಶುಪಾಲರು ಚಂದ್ರಾವತಿ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋತೆರಪಿ ಪ್ರಾಂಶುಪಾಲ ಡಾ. ಮನೀಶ್, ಗೌರವ ಪ್ರಾಧ್ಯಾಪಕರು ಶೀಲಾ ಜಿ. ನಾಯಕ್, ಕಮ್ಯೂನಿಟಿ ಮೆಡಿಸಿನ್ ವಿಭಾಗ ಮುಖ್ಯಸ್ಥರು ಡಾ. ದಿನೇಶ್ ಪಿ.ವಿ, ಮೈಕ್ರೋಬಯಾಲಜಿ ವಿಭಾಗದ ಪ್ರೊ. ಡಾ. ನಮ್ರತಾ ಕೆ.ಜಿ, ಜನರಲ್ ಸರ್ಜರಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಸಾಯಿಗೀತಾ ಜ್ಞಾನೇಶ್, ಪ್ರೊ. ಬಿ.ಎಂ ಪ್ರೇಮ, ಆಹಾರ ತಜ್ಞರಾದ ದೀಪ್ತಿ ಎಂ.ವೈ, ಪ್ರೊಫೆಸರ್ ನಿಧಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ತಯಾರಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಪೌಷ್ಟಿಕ ಆಹಾರಗಳನ್ನು ತಯಾರಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾದ್ಯಾಪಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು
ಭಾಗವಹಿಸಿದ್ದರು.