ತುಳು ಕೂಟ ಕುವೈಟ್ ವತಿಯಿಂದ ಅದರ ಬೆಳ್ಳಿ ಹಬ್ಬದ ಸ್ಮರಣಾರ್ಥ ಎಸ್.ಎಸ್.ಎಲ್.ಸಿ ಯಲ್ಲಿ ಸರಕಾರಿ ಶಾಲೆಯಲ್ಲಿ ಕಲಿತು ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗಾಗಿ ನೀಡುವ ವಿದ್ಯಾರ್ಥಿ ವೇತನವನ್ನು ಈ ಬಾರಿ ರಾಜ್ಯದಲ್ಲಿ ಎರಡನೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿ ಸೃಜನಾದಿತ್ಯ ಶೀಲ ಇವರಿಗೆ ಇತ್ತೀಚೆಗೆ ವಿತರಿಸಲಾಯಿತು.
ರೂ7500 ಹಾಗೂ ಪ್ರಶಸ್ತಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಕಿಶೋರ್ ಕುಮಾರ್ ಯು.ವಿ ಯವರು ವಿದ್ಯಾರ್ಥಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನಕ್ಕೆ ಶಿಫಾರಸ್ಸು ಮಾಡಿದ ನಿವೃತ್ತ ದೈಹಿಕ ಶಿಕ್ಷಕರಾದ ಬಾಲಕೃಷ್ಣ ನಾಯ್ಕ ಅಜ್ಜಾವರ, ವಿದ್ಯಾರ್ಥಿ ವೇತನದ ಆಯ್ಕೆಗೆ ಕಾರಣರಾದ ಕುವೈಟ್ ಉದ್ಯಮಿ ಇರ್ಫಾದ್ ಎ.ಬಿ ಪಲ್ಲತ್ತಡ್ಕರವರ ಸಹೋದರ ತಾಜುದ್ದೀನ್ ಎ.ಬಿ ಪಲ್ಲತ್ತಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೂಪರಿಂಟೆಂಡೆಂಟ್ ರವರಾದ ಶಿವಪ್ರಸಾದ್ ಜಿ.ಎಸ್, ಶಿವಪ್ರಸಾದ್ ಕೆ.ವಿ, ಶಿಕ್ಷಣ ಸಂಯೋಜಕಿ ಶ್ರಿಮತಿ ಸಂದ್ಯಾ ಕುಮಾರಿ ಬಿ.ಎಸ್, ಕಛೇರಿ ಸಿಬ್ಬಂದಿಗಳಾದ ವಿಜೇತ್ ಎಂ.ಸಿ, ಯೋಗೀಶ್ ಭರತ್ ಹಾಗೂ ಸೋಮಶೇಖರ ಎಂ ರವರು ಉಪಸ್ಥಿತರಿದ್ದರು.