
ಪಂಜ ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವಸದಸ್ಯರ 39ನೇ ವಾರ್ಷಿಕ ಸಾಮಾನ್ಯ ಸಭೆ ಸೆ.24.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರಗಿತು.
















ಸಂಘದ ಅಧ್ಯಕ್ಷ ಭಾಸ್ಕರ ನಾಯಕ್
ಸಭಾಧ್ಯಕ್ಷತೆ ವಹಿಸಿ ಮಾತನಾಡಿ
“ಸಂಘವು 2024-25 ಸಾಲಿನಲ್ಲಿ ಒಟ್ಟು ರೂ. 2,42,02,,313.22 ಕೋಟಿ ವ್ಯವಹಾರ ನಡೆಸಿ ರೂ. 3,30,843.24 ಲಕ್ಷ ನಿವ್ವಳ ಲಾಭ ಗಳಿಸಿದೆ.ಪ್ರತೀ ಲೀಟರ್ ಗೆ 1ರೂ10 ಪೈಸೆ ಬೋನಸ್, ಶೇ.7 ಷೇರು ಡಿವಿಡೆಂಡ್ ನೀಡಲಿದ್ದೇವೆ”. ಎಂದು ಹೇಳಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಪಂಜ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಉಪಾಧ್ಯಕ್ಷ ಮೋನಪ್ಪ ಕೆಬ್ಲಾಡಿ , ನಿರ್ದೇಶಕರಾದ ಚನಿಯಪ್ಪ ಗೌಡ ಕುಳ್ಳಕೋಡಿ, ನಾರಾಯಣ ನಾಯ್ಕ ಚಾಳೆಗುಳಿ, ಜಯಂತ ಕುಳ್ಳಕೋಡಿ, ಉದಯ ಬಿಡಾರಕಟ್ಟೆ, ಮೋನಪ್ಪ ಗೌಡ ಮಿತ್ರಾಣೆ, ಪೆರ್ಗಡೆ ಕಾಣಿಕೆ,
ಗಣೇಶ ಪಾಲೋಳಿ, ಪದ್ಮಯ್ಯ ನಾಯ್ಕ ಸಂಪ, ಶ್ರೀಮತಿ ಲಕ್ಷ್ಮೀ ನೇರಳ, ಶ್ರೀಮತಿ ಯಶೋಧ ಬರೆಮೇಲು , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
.
ಸನ್ಮಾನ- ಗೌರವಾರ್ಪಣೆ:
2024- 25 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಶ್ರೀಮತಿ ರಾಜೀವಿ ಪಿ. ಪ್ರಥಮ, ಶ್ರೀಮತಿ ಯಶೋಧ ಬಿ ಸಿ ದ್ವಿತೀಯ, ಕುಸುಮಾಧರ ಕೆ ತೃತೀಯ ಸ್ಥಾನ ಪಡೆದಿದ್ದು ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಹೆಚ್ಚು ಹಾಲು ಹಾಕಿದ 10 ಸದಸ್ಯರನ್ನು ಗುರುತಿಸಿ ಬಹುಮಾನ ನೀಡಲಾಯಿತು. ಹೆಚ್ಚು ಗುಣಮಟ್ಟದ ಹಾಲು ನೀಡಿದ ಇಬ್ಬರು ಸದಸ್ಯರಿಗೆ ಬಹುಮಾನ ನೀಡಲಾಯಿತು. 2024- 25 ನೇ ಸಾಲಿನಲ್ಲಿ ಸಂಘಕ್ಕೆ ಹಾಲು ನೀಡಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಸಂಘದಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಗೊಂಡ ಶ್ರೀಮತಿ ವನಿತಾ ಕರಿಮಜಲು ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿ ಶ್ರೀಮತಿ ಹೇಮಾವತಿ ನಾಯರ್ ಕೆರೆ ಪ್ರಾರ್ಥಿಸಿದರು. ಭಾಸ್ಕರ ನಾಯಕ್ . ಸ್ವಾಗತಿಸಿದರು. ಆದರ್ಶ ಚಿದ್ಗಲ್ಲು ವರದಿ ವಾಚಿಸಿದರು. ಮೋನಪ್ಪ ಕೆಬ್ಲಾಡಿ ವಂದಿಸಿದರು. ಜಾನುವಾರು ಕೃತಕ ಗರ್ಭಧಾರಣೆ ಕಾರ್ಯಕರ್ತ ಕೇಶವ ಕೆ, ಸಿಬ್ಬಂದಿಗಳಾದ ಮಧುಸೂದನ ಕೆ ಆರ್, ಪದ್ಮಯ್ಯ ನಾಯ್ಕ ಕೆಮ್ಮೂರು ಸಹಕರಿಸಿದರು.











