ಅಜ್ಜಾವರ ಶ್ರೀ ಮಹಿಷನರ್ದಿನೀ ದೇವಸ್ಥಾನದಲ್ಲಿ ಭಜನಾ ತರಬೇತಿ ಮತ್ತು ಸಂಸ್ಕಾರ ವಾಹಿನಿ ಶಿಬಿರ ಸೆ.23ರಂದು ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಶ್ರೀಮಹಿಷ ಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು ನೆರವೇರಿಸಿದರು.















ವಿಶ್ವಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ ಸುಳ್ಯ ಪ್ರಖಂಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಅಜ್ಜಾವರ ಭ ಜನಾ ಪರಿಷತ್ತು ಅಜ್ಜಾವರ ವಲಯ ಗಳ ಸಹಯೋಗದೊಂದಿಗೆ ಭಜನಾ ತರಬೇತಿ ಮತ್ತು ಸಂಸ್ಕಾರ ವಾಹಿನಿ ಶಿಬಿರವು ಅ.30ರ ತನಕ ನಡೆಯಲಿದೆ.

ಈ ಸಂದರ್ಭ ಪ್ರಖಂಡ ಅಧ್ಯಕ್ಷರಾದ ಶ್ರೀಕಾಂತ್ ಗೋಳ್ವಾಲ್ಕರ್ ಮತ್ತು ಪ್ರಖಂಡದ ಎಲ್ಲ ಪ್ರಮುಖರು , ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಎ ಭಾಸ್ಕರ್ ರಾವ್ ಬಯಂಬು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಭ ಜನಾ ಪರಿಷತ್ತು ಅಜ್ಜಾವರ ವಲಯ ಇದರ ಪದಾಧಿಕಾರಿಗಳು ಶಿಬಿರ ಅಧಿಕಾರಿ ರಾಜೇಶ್ ಶೆಟ್ಟಿ ಮೇನಾಲ, ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸುಭೋದ್ ಶೆಟ್ಟಿ ಮೇನಾಲ ಶಿವಾಜಿ ಶಾಖೆ ಅಧ್ಯಕ್ಷರಾದ ಸೀತಾ ರಾಮ ಕರ್ಲಪ್ಪಾಡಿ, ಕಾರ್ಯದರ್ಶಿಯಾದ ಪ್ರಬೋದ್ ಶೆಟ್ಟಿ ಮೇನಾಲ, ಸಂಚಾಲಕರಾದ ಅನಿಲ್ ರಾಜ್ ಕರ್ಲಪ್ಪಾಡಿ, ಮಾತೃ ಶಕ್ತಿ ಪ್ರಮುಖರಾದ ಶ್ರೀಮತಿ ಮಮತಾ ಪೃಥ್ವಿರಾಜ್ ಮೇನಾಲ, ದುರ್ಗವಾಹಿನಿ ಪ್ರಮುಖರಾದ ಶ್ರೀಮತಿ ರಮ್ಯಾ ಭವಾನಿ ಶಂಕರ ಶಿರ್ವಾಜೆ ಮತ್ತು ಮಾತೃ ಶಕ್ತಿ ದುರ್ಗ ವಾಹಿನಿ ಎಲ್ಲಾ ಪ್ರಮುಖರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಜ್ಜಾವರ ಪ್ರಮುಖರು ಶ್ರೀ ಕೃಷ್ಣ ಭಜನಾ ಮಂದಿರದ ಮೇನಾಲ ದ ಸದಸ್ಯರು, ಚನಿಯ ಕಲ್ತಡ್ಕ , ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್, ಚೈತ್ರ ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ಶಶ್ಮಿ ಭಟ್ ಹಾಗೂ ಈ ಸಂಘಟನೆಯ ಅಧ್ಯಕ್ಷ ಹಾಗೂ ಸರ್ವ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ವಿವಿಧ ಸಂಘಟನೆಗಳ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ದಿನ 46 ವಿದ್ಯಾರ್ಥಿಗಳು ನೋಂದಾವಣೆಗೊಂಡು ಎರಡನೇ ದಿನವಾದ ಈ ದಿನ 80 ಸಂಖ್ಯೆಯನ್ನು ದಾಟಿದೆ.











