














ಮುಂಗಾರು ವಾಲಿಬಾಲ್ ಅಕಾಡೆಮಿ ವತಿಯಿಂದ 9 ದಿನಗಳ ಉಚಿತ ವಾಲಿಬಾಲ್ ಬೇಸಿಗೆ ಶಿಬಿರವು ಸೆ. 26 ರಿಂದ ಅಕ್ಟೋಬರ್ 4ರವರೆಗೆ ಸುಳ್ಯದ ಗ್ರೀನ್‌ವ್ಯೂ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ನಡೆಯಲಿರುವುದು.
14 ರಿಂದ 20 ವರ್ಷದ ಒಳಗಿನ ಬಾಲಕರಿಗೆ ಮಾತ್ರ ಅವಕಾಶವಿದ್ದು, 25 ಜನರಿಗೆ ಮಾತ್ರ ಅವಕಾಶ ಲಭಿಸಲಿದೆ. ಬೆಳಿಗ್ಗೆ 6.3೦ರಿಂದ 9.3೦ರವರೆಗೆ, ಸಂಜೆ 4.3೦ರಿಂದ 6.3೦ರವರೆಗೆ ತರಬೇತಿ ನಡೆಯಲಿದ್ದು, ಎನ್‌ಐಎಸ್ ನುರಿತ ತರಬೇತುದಾರಿಂದ ಉಚಿತ ತರಬೇತಿ, ಶಿಸ್ತು, ತಂಡ ಭಾವನೆ ಹಾಗೂ ನಾಯಕತ್ವ ಕೌಶಲ್ಯ, ಆರೋಗ್ಯ & ಆತ್ಮವಿಶ್ವಾಸ ವೃದ್ಧಿಗೊಳ್ಳಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.










