ಅ. 1ರ ತನಕ ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ನವರಾತ್ರಿ ಉತ್ಸವ

0

ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ನವರಾತ್ರಿ ಉತ್ಸವವು ಸೆ. 22ರಂದು ಆರಂಭಗೊಂಡಿದ್ದು, ಅ.
01ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ನವರಾತ್ರಿಯ ಪ್ರತಿದಿನ ಬೆಳಿಗ್ಗೆ ಗಂಟೆ 10-30ರಿಂದ ಮಾತೆಯರಿಂದ ಕುಂಕುಮಾರ್ಚನೆ, ಸಂಜೆ ಗಂಟೆ 6-00ರಿಂದ ಭಜನೆ, ಚಂಡಿಕಾದುರ್ಗಾ ಹವನ, ದುರ್ಗಾಪೂಜೆ, ರಾತ್ರಿ ಗಂಟೆ 7-30ಕ್ಕೆ ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನಸಂತರ್ಪಣೆ ನಡೆಯಲಿದೆ. ಚೊಕ್ಕಾಡಿ ಶ್ರೀರಾಮ‌ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಚೂಂತಾರು ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.