ಪಂಜದ ಕಮಿಲ ಕಾಂಪ್ಲೆಕ್ಸ್ ನಲ್ಲಿ ಪಂಚಶ್ರೀ ಎಂಟರ್‌ಪ್ರೈಸಸ್ ಶುಭಾರಂಭ

0

ಪಂಜದ ಹೃದಯ ಭಾಗದಲ್ಲಿ ಕೃಷಿ ಉಪಕರಣಗಳ ದುರಸ್ತಿ ಮತ್ತು ಮಾರಾಟ ಸಂಸ್ಥೆ : ಡಾ.ರಾಮಯ್ಯ ಭಟ್

ಸಂಸ್ಥೆ ಉತ್ತಮ ಬೆಳೆಯಲಿ: ಡಾ.ದೇವಿಪ್ರಸಾದ್ ಕಾನತ್ತೂರ್

ಏಳು ವರ್ಷಗಳಿಂದ ಜನಪ್ರಿಯತೆ ಗಳಿಸಿದ ಸಂಸ್ಥೆಯಿನ್ನು ಪಂಜದಲ್ಲಿ: ಪವನ್ ಪಲ್ಲತ್ತಡ್ಕ

ಪಂಜದ ಕಮಿಲ ಕಾಂಪ್ಲೆಕ್ಸ್ ನಲ್ಲಿ ಹಿತೇಶ್ ಪಂಜದಬೈಲು ರವರ ಮಾಲಿಕತ್ವದ ಪಂಚಶ್ರೀ ಎಂಟರ್‌ಪ್ರೈಸಸ್ ಸೆ.25 ರಂದು ಶುಭಾರಂಭ ಗೊಂಡಿತು.


ಹಿರಿಯ ವೈದ್ಯರಾದ
ಡಾ| ರಾಮಯ್ಯ ಭಟ್ ಪಂಜ ಉದ್ಘಾಟಿಸಿ ಮಾತನಾಡಿ” ಪಂಜದ ಹೃದಯ ಭಾಗದಲ್ಲಿ ಕೃಷಿಕರಿಗೆ ಅತ್ಯಗತ್ಯವಾಗಿದ್ದ ಕೃಷಿ ಯಂತ್ರೋಪಕರಣಗಳ ಸರ್ವಿಸ್ ಮತ್ತು ಮಾರಾಟ ಮಳಿಗೆಯಿದು. ಸಂಸ್ಥೆಯು ಅತ್ಯಂತ ಎತ್ತರಕ್ಕೆ ಬೆಳೆಯಲಿ”. ಎಂದು ಶುಭ ಹಾರೈಸಿದರು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಡಾ. ದೇವಿಪ್ರಸಾದ್ ಕಾನತ್ತೂರ್ ” ಸಾಮಾಜಿಕ ಸೇವೆಯಲ್ಲಿ ಸದಾ ತೊಡಗಿರುವ ಹಿತೇಶ್ ಪಂಜದಬೈಲು ರವರ ಸಂಸ್ಥೆಯಿಂದ ಉತ್ತಮ ಸೇವೆ ದೊರೆಯಲಿ ಸಂಸ್ಥೆ ಉತ್ತಮವಾಗಿ ಬೆಳೆಯಲಿ”. ಶುಭ ಹಾರೈಸಿದರು.


ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಮಾತನಾಡಿ ” ಕಳೆದ ಏಳು ವರ್ಷಗಳಿಂದ ಹಿತೇಶ್ ಪಂಜದಬೈಲು ರವರು ಕೃಷಿ ಯಂತ್ರೋಪಕರಣಗಳ ಸರ್ವಿಸ್ ಮತ್ತು ಸೇಲ್ಸ್ ಸಂಸ್ಥೆ ನಡೆಸಿ ಉತ್ತಮ ಹೆಸರು ಗಳಿಸಿದ್ದಾರೆ. ಮುಂದೆ ಪಂಜದಲ್ಲಿ ಸೇವೆ ನೀಡಲಿದ್ದಾರೆ” ಎಂದು ಶುಭ ಹಾರೈಸಿದರು.ಕಮಿಲ ಕಾಂಪ್ಲೆಕ್ಸ್ ಮಾಲಕ ಹೊನ್ನಪ್ಪ ಕಮಿಲ, ಲೋಕಯ್ಯ ಗೌಡ ಪಂಜದಬೈಲ್ , ಸಂಸ್ಥೆಯ ಮಾಲಕ ಹಿತೇಶ್ ಪಂಜದಬೈಲು ವೇದಿಕೆಯಲ್ಲಿ ಉಪಸ್ಥಿತರಿರುವರು.ಸಂಸ್ಥೆಯ ಮೊದಲ ಗ್ರಾಹಕ ಆನಂದ ಗೌಡ ಜಳಕದಹೊಳೆ ಅವರಿಗೆ ಯಂತ್ರವನ್ನು ಡಾ.ರಾಮಯ್ಯ ಭಟ್ ರವರು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಶಶಿ ದಾಸ್ ನಾಗತೀರ್ಥ ಪ್ರಾರ್ಥಿಸಿದರು.ಹಿತೇಶ್ ಪಂಜದಬೈಲು ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು.ಗೌರೀಶ್ ಕೊಲ್ಲಮೊಗ್ರು ವಂದಿಸಿದರು
ನಮ್ಮಲ್ಲಿ ಎಲ್ಲಾ ವಿಧದ ಕೃಷಿ ಉಪಕರಣಗಳ ದುರಸ್ತಿ ಮತ್ತು ಮಾರಾಟ ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.