ಪಂಜ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ

0

ಸರ್ಕಾರಿ ಪದವಿ ಪೂರ್ವ ಕಾಲೇಜುನ ೨೦೧೨-೧೩ ನೇ ಸಾಲಿನ ಪಿಯುಸಿ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡು ಬರುವ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸೆ. ೨೧ ರಂದು ಪಂಜದ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಂಜ ಕಾಲೇಜಿನ ಪ್ರಾಂಶುಪಾಲರಾಗಿದ್ದು ಸೇವಾ ನಿವೃತ್ತಿ ಹೊಂದಿರುವ ವೆಂಕಪ್ಪ ಗೌಡ.ಕೆ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಜ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ತಂಡದ ಅಧ್ಯಕ್ಷ ಸುಮಂತ್ ವೇದಿಕೆಯಲ್ಲಿದ್ದರು. ಪ್ರವೀಣ ಪ್ರಾರ್ಥಿಸಿ, ಮೂಕಾಂಬಿಕ ಸ್ವಾಗತಿಸಿದರು. ದಿವ್ಯಾ.ಕೆ ಯವರು ಪ್ರಾಸ್ತಾವಿಕ ಮಾತನಾಡಿದರು. ಪುನೀತ ವಂದಿಸಿ, ಜುಸೈನಾ ನಿರೂಪಣೆ ಮಾಡಿದರು.
ಹೇಮಲತಾ ವರದಿ ವಾಚನ ಮಾಡಿದರು, ಲತೀಶ, ರಾಜೇಶ್, ಪ್ರಶಾಂತ್, ಲಿಖಿತ್, ಪವಿತ್ರ, ಅನಿತಾ, ಪವಿತ್ರ, ನೇಮಿರಾಜ್, ಆಸಿರ್, ರಕ್ಷಿತ್, ನವೀನ, ಶರತ್, ಸುರಯ್ಯಾ ಅನಿತಾ ಉಪಸ್ತಿತರಿದ್ದರು.