ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸೆ.24 ರಂದು ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಆಚರಿಸಲಾಯಿತು.
















ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ವಿಭಾಗ ಮುಖ್ಯಸ್ಥ ಹಾಗೂ ಎನ್.ಎಸ್.ಎಸ್ ಸಲಹಾ ಸಮಿತಿಯ ಸದಸ್ಯ ಸಂಜೀವ ಕುದ್ಪಾಜೆ ತಮ್ಮ ಇಪ್ಪತ್ತೇಳು ವರ್ಷಗಳ ಎನ್.ಎಸ್.ಎಸ್ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಎನ್. ಎಸ್.ಎಸ್ ಘಟಕಾಧಿಕಾರಿ ಚಿತ್ರಲೇಖ ಕೆ.ಎಸ್ ಹಾಗೂ ಹರಿಪ್ರಸಾದ್ ಅತ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೆಯೇ ಕಾಲೇಜಿನ ಶಿಕ್ಷಕ ವೃಂದ ಹಾಗೂ ಎನ್.ಎಸ್.ಎಸ್ ನ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಘಟಕದ ಸ್ವಯಂ ಸೇವಕರು ಪ್ರಾರ್ಥಿಸಿ, ಚಿತ್ರಲೇಖ ಕೆ.ಎಸ್ ಸ್ವಾಗತಿಸಿ, ಹರಿಪ್ರಸಾದ್ ಅತ್ಯಾಡಿ ವಂದಿಸಿದರು. ದ್ವಿತೀಯ ಬಿ.ಎಸ್ಸಿ ಅಭಿಷೇಕ್ ಎಂ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಏನ್.ಎಸ್.ಎಸ್ ನಾಯಕರಾದ ಗೌತಮ್ ಬಿ ದ್ವಿತೀಯ ಬಿ.ಕಾಂ, ಅರ್ಪಿತಾ ದ್ವಿತೀಯ ಬಿ.ಎಸ್ಸಿ, ತಸ್ವನ್ ದ್ವಿತೀಯ ಬಿ. ಸಿ. ಎ, ಅನ್ವಿತ ದ್ವಿತೀಯ ಬಿ. ಕಾಂ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಎನ್.ಎಸ್.ಎಸ್ ಸಾಂಸ್ಕೃತಿಕ ಕಾರ್ಯದರ್ಶಿ ಆಕ್ಷತ್, ಸ್ಪೋರ್ಟ್ಸ್ ಸೆಕ್ರೆಟರಿ ಜನನಿ ದ್ವಿತೀಯ ಬಿಸಿಎ , ಮೀಡಿಯಾ ಪಬ್ಲಿಕೇಟರ್ ಕೃತಿ ದ್ವಿತೀಯ ಬಿ.ಎ, ಎನ್. ಎಸ್ ಎಸ್ ಛಾಯಾಗ್ರಹಕರು ತರುಣ್ ದ್ವಿತೀಯ ಬಿ.ಬಿ.ಎ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.











