ದಿ|ಮಹಮ್ಮದ್ ಸಹನರವರು 40 ಹಿಂದೆ ಆರಂಭಿಸಿ ವಿಶ್ವಾಸಾರ್ಹ ಸೇವೆಯನ್ನು ಮಾಡಲು ಕಲಿಸಿ ಅದನ್ನು ಮುಂದುವರಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ: ಮಜೀದ್ ಸಹನ
ಸುಮಾರು 40 ವರ್ಷಗಳ ಹಿಂದೆ ಸುಳ್ಯ ಗಾಂಧಿನಗರದಲ್ಲಿ ದಿ|ಮಹಮ್ಮದ್ ಸಹನ ರವರು ಗಾಂಧಿನಗರ ಮಸೀದಿ ಬಳಿಯಲ್ಲಿರುವ ಫ್ಯಾನ್ಸಿ ಕಟ್ಟಡದಲ್ಲಿ ಗ್ಲಾಸ್ ಫ್ರೇಮ್ ವರ್ಕ್ಸ್ ಅಂಗಡಿಯನ್ನು ತೆರೆದು ಉದ್ಯಮ ಕ್ಷೇತ್ರವನ್ನು ಆರಂಭಿಸಿ 15 ವರ್ಷಗಳ ಕಾಲ ತಮ್ಮ ಉತ್ತಮ ಸೇವೆಯ ಮೂಲಕ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಉದ್ಯಮವನ್ನು ವಿಸ್ತರಿಸಿ ದಿ| ಪಿ.ಎ ಹಮೀದ್ ಜೊತೆ ಸೇರಿ ಪಾಲುದಾರಿಕೆಯಲ್ಲಿ ಸಹನ ಎಂಬ ಹೆಸರಿನಲ್ಲಿ ಶಾಮಿಯಾನ ಹಾಗೂ ಮದುವೆ ಸಭೆ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ರೀತಿಯ ಸಾಮಾಗ್ರಿಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಶಾಮಿಯಾನ ಉದ್ಯಮವನ್ನು ಪ್ರಾರಂಭಿಸಿದರು. ಈಗಲೂ ಸುಳ್ಯದಲ್ಲಿ ಸಹನ ಶಾಮಿಯಾನ ಮನೆಮಾತಾಗಿ ಜನರ ಪ್ರೀತಿ ಮತ್ತು ವಿಶ್ವಾಸರ್ಹ ಸೇವೆಯಲ್ಲಿ ಮುಂದುವರಿಯುತ್ತಿದೆ.















ಉದ್ಯಮವನ್ನು ಮತ್ತೆ ವಿಸ್ತರಿಸುವ ಸಹನ ಗ್ಲಾಸ್ ಎಂಡ್ ಪ್ಲೈವುಡ್ ಪ್ರಾರಂಭಿಸಿದರು ಮತ್ತೆ ಸಂಸ್ಥೆಯನ್ನು ಜನತಾ ಕಾಂಪ್ಲೆಕ್ಸನಲ್ಲಿ ವಿಸ್ತರಿಸಿದ ಸಂದರ್ಭದಲ್ಲಿ ತಂದೆ ಜೊತೆಜೊತೆಗಯಾಗಿ ಉದ್ಯಮದಲ್ಲಿ ಕೈಜೊಡಿಸಿ ಕೊಂಡು ದಿ.ಮಹಮ್ಮದ್ ಸಹನ ರವರ ಪುತ್ರ ಅಬ್ದುಲ್ ಮಜೀದ್ ತಂದೆ ತಕ್ಕ ಮಗನಾಗಿ ಉದ್ಯಮ ತಂದೆಯ ಜೊತೆಯಲ್ಲಿ ಕಲಿತು ತಂದೆಗೆ ಬೆನ್ನಲುಬಾಗಿ ನಿಂತು ಯಶಸ್ವೀ ಉದ್ಯಮಿಯಾಗಿ ಬೆಳೆದ ಯುವ ಉದ್ಯಮಿಯಾಗಿ ಬೆಳೆದ ಇದೇ ಸಂಧರ್ಭದಲ್ಲಿ ತಂದೆ ನಿಧನರಾಗುತ್ತಾರೆ ಮತ್ತೆ ತಂದೆ ಅಡಿಪಾಯ ಹಾಕಿಕೊಟ್ಟ ಉದ್ಯಮವನ್ನು ಮುಂದುವರಿಸಿ ತಾನು ಮಾಡುತ್ತಿರುವ ಉದ್ಯಮವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ
ಅತ್ಯಾಧುನಿಕ ಶೈಲಿಯು ವಿವಿಧ ವಿನ್ಯಾಸದ ಮನೆಯ ಬಾಗಿಲು ಮತ್ತು ಕಿಟಕಿಗಳಿಗೂ ಇನ್ನಿತರ ಮನೆ ಒಳ ವಿನ್ಯಾಸಗಳಿಗೆ ಬೇಕಾಗುವ ಸಾಮಗ್ರಿಗಳ ಒಳಗೊಂಡ ವಿಶೇಷ ಮಳಿಗೆ ಸಹನ ಒಪನಿಂಗ್ ಸಲ್ಯೂಶನ್ ಸಂಸ್ಥೆ ಗಾಂಧಿನಗರದ ಮಸೀದಿಯ ಮುಂಬಾಗದಲ್ಲಿ ಗೋಪಿಕಾ ಕಟ್ಟಡದ ಮೋರ್ ಸೂಪರ್ ಮಾರ್ಕೇಟ್ ನ ಮೇಲಿನ ಮಹಡಿಯಲ್ಲಿ ಸೆ 22 ರಂದು ಶುಭಾರಂಭ ಗೊಂಡಿತು.

ಮಳಿಗೆಯನ್ನು ಸುಳ್ಯದ ಹಿರಿಯ ಉದ್ಯಮಿ ಕರ್ನಾಟಕ ಪೈವುಡ್ಸ್ ಮಾಲಕ ಕೃಷ್ಣ ಕಾಮತ್ ಮತ್ತು ಪದ್ಮಶ್ರೀ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು.
ಲಾಕ್ ಮತ್ತು ಹ್ಯಾಂಡಲ್ಸ್ ವಿಭಾಗವನ್ನು ಹಿರಿಯ ಉದ್ಯಮಿ ಗಣೇಶ್ ಪ್ರಿಂಟರ್ಸ್ ಮಾಲಕ ಪಿ.ಕೆ ಉಮೇಶ್ ಮತ್ತು ಸೂಡಾ ಅಧ್ಯಕ್ಷ ಕೆ ಎಂ ಮುಸ್ತಫಾ ಉದ್ಘಾಟಿಸಿದರು.
ಬೆಡ್ ರೂಂ ಮತ್ತು ವಾಲ್ಡ್ರೂಬ್ ಸೆಟ್ಟಿಂಗ್ ವಿಭಾಗವನ್ನು ವರ್ತಕರ ಸಂಘದ ಅಧ್ಯಕ್ಷ ಹಾಗೂ ಕಾಯರ್ತೋಡಿ ದೇವಸ್ಥಾನ ಅದ್ಯಕ್ಷ ಎಂ ವೆಂಕಪ್ಪ ಗೌಡ ಉದ್ಘಾಟಿಸಿದರು.
ಕಿಚನ್ ಸೆಟ್ಟಿಂಗ್ ವಿಭಾಗವನ್ನು ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಸಂಕೇಶ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಕೇಶ್ ಹಾಗೂ ಕಟ್ಟಡ ಮಾಲಕ ಗೋಪಿನಾಥ್ ಬೊಳುಬೈಲು ಉದ್ಘಾಟಿಸಿದರು.

ಕೆಪೆಕ್ ಮಾಜಿ ನಿರ್ದೇಶಕರಾದ ಹಾಜಿ ಪಿ ಎ ಮಹಮ್ಮದ್, ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಜನತಾ ಗ್ರೂಪ್ಸ್ ಹಾಜಿ ಅಬ್ದುಲ್ ಹಮೀದ್ ಜನತಾ,ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್, ಅನ್ಸಾರ್ ಉಪಾಧ್ಯಕ್ಷರಾದ ಕೆ ಬಿ ಇಬ್ರಾಹಿಂ, ಹನೀಫ್ ಬುಶ್ರಾ,ಉದ್ಯಮಿ ಸೋಮನಾಥ ಪೂಜಾರಿ,ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್, ಮೊದಲಾದವರು ಉಪಸ್ಥಿತರಿದ್ದರು
ಮಳಿಗೆಯಲ್ಲಿ ಗ್ಲಾಸ್ & ಪ್ಲೈವುಡ್ ಇದಕ್ಕೆ ಸಂಬಂಧಿಸಿದ ಎಲ್ಲಾ ಬಿಡಿಭಾಗಗಳು, ಅತ್ಯಾಧುನಿಕ ಶೈಲಿಯ ಎಲ್ಲಾ ತರಹದ ಕರ್ಟನ್ ಗಳು,ಎಲ್ಲಾ ತರಹದ ಡೋರ್ ಗಳು ಮತ್ತು ಅದಕ್ಕೆ ಬೇಕಾಗುವ ಲಾಕ್ ಮತ್ತು ಅಲಂಕಾರಿಕ ವಸ್ತುಗಳು, ಸೆಪ್ಟಿಲಾಕ್ ಮತ್ತು ಲಾಕರ್,ಮೀರರ್,ಡ್ರೆಸಿಂಗ್ ಮೀರರ್,ಎಲ್ಇಡಿ ಮೀರರ್, ಬುಲೆಟ್ ಮತ್ತು ಬ್ರಾಸ್ ಕಂಪೆನಿಯ ಕಾರ್ಪೆಂಟರ್ ಟೂಲ್ ಕಿಟ್ಟ್,ಬ್ರಾಸ್ ಹ್ಯಾಂಡಲ್ಸ್,ಕ್ಯಾಬಿನೆಟ್ ಹ್ಯಾಂಡಲ್ಸ್,ಗ್ರೋದೆಜ್,ಯುರೋಪ,ಏಲ್ ಸೇರಿದಂತೆ ಅನೇಕ ಕಂಪೆನಿಗಳ ಲಾಕ್ ಹಾಗೂ ಇನ್ನಿತರ ಪಿಟ್ಟಿಂಗ್ ಸಾಮಾಗ್ರಿಗಳು, ಜುಲ ಚೈನ್,ಮರದ ಡೋರ್,ಪ್ಲೈವುಡ್ ಡೋರ್,ಸ್ಟೀಲ್ ಡೋರ್,ಪಿವಿಸಿ ಡೋರ್,ಡಬ್ಲ್ಯೂ ವಿಸಿ ಡೋರ್,ಯುಪಿವಿಸಿ ಡೋರ್,ಡೋರ್ ಪ್ರೇಮ್ ಮತ್ತು ವುಡ್,ಗ್ಲಾಸ್, ವಿಂಡೋ& ವಿಂಡೋ ಪ್ರೇಮ್ ,ಟಪನ್ ಗ್ಲಾಸ್ ಮತ್ತು ಗ್ಲಾಸ್ ಪಿಟ್ಟಿಂಗ್ಸ್,ಬಾತ್ ರೂಂ ಬೇಕಾಗುವ ಎಲ್ಲಾ ತರಹದ ಪಿಟ್ಟಿಂಗ್ ಸಾಮಾಗ್ರಿಗಳು,ಸೋಪಾ ಲೆಗ್ಸ್& ವೀಲ್ಸ್ ಐಟಂ ಗಳು, ಹಾಗೂ ಪುಲ್ ಶೀಟ್ ಲ್ಯಾಮಿನೇಟ್ ಡಿಸ್‌ಪ್ಲೇ ಸಾಮಾಗ್ರಿಗಳು ಸೇರಿದಂತೆ ಅನೇಕ ರೀತಿಯ ವಿನೂತನ ಶೈಲಿಯ ಡೋರ್ ಮತ್ತು ವಿಂಡೊ,ಲಾಕ್ ಸೇರಿದಂತೆ ಗೃಹ ಮತ್ತು ಕಟ್ಟಡಗಳಿಗೆ ಬೇಕಾಗುವ ಎಲ್ಲಾ ರೀತಿಯ ಪಿಟ್ಡಿಂಗ್ ಮತ್ತು ಬಿಡಿಬಾಗಗಳು ಒಂದೇ ಮಳಿಗೆಯಲ್ಲಿ ಸಿಗಲಿದೆ.

ಅಲ್ಲದೇ ನಿಮ್ಮ ಮನೆಗಳಿಗೆ ಬೇಕಾಗುವ ಸಂಪೂರ್ಣ ಬೆಡ್ ರೂಂ ಸೆಟ್ಟಿಂಗ್,ಕಿಚನ್ ಸೆಟ್ಟಿಂಗ್ ಗ್ರಾಹಕರಿಗೆ ಬೇಕಾಗುವ ರೀತಿಯಲ್ಲಿ ತಯಾರಿಸಿ ಕೊಡಲಾಗುವು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ










