ಸುಳ್ಯ ದಸರಾ 2025 ಇದರ ಪೂರ್ವಭಾವಿ ಸಭೆ

0


ಸೆಪ್ಟೆಂಬರ್ ೨೯ರಂದು ನಡೆಯಲಿರುವ ದಸರಾ ಉತ್ಸವ ಪೂರ್ವಭಾವಿ ಸಭೆಯು ಶ್ರೀ ಶಾರದಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ, ದಸರಾ ಮಹಿಳಾ ಸಮಿತಿ ಇದರ ಸಭೆಯು ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಮತ್ತು ಶಾರದಾಂಬಾ ಉತ್ಸವ ಸಮಿತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಲೀಲಾಧರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ ಕೇಕಡ್ಕ ಅವರು ಮಾತನಾಡಿ ಈ ಸಲದ ದಸರಾ ಉತ್ಸವವು ರೂ. ೧೮ಲಕ್ಷ ವೆಚ್ಚದಲ್ಲಿ ನಡೆಯಲಿದೆ.


ಪ್ರತಿ ದಿನದ ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ರಾತ್ರಿ ೭ಗಂಟೆಯಿಂದ ಆರಂಭಗೊಂಡು ರಾತ್ರಿ ೧೦ಗಂಟೆಗೆ ವರೆಗೆ ನಡೆಯಲಿದೆ. ಕಾರ್ಯಕ್ರಮವು ಅದರದೇ ಆದ ಚೌಕಟ್ಟಿನಲ್ಲಿ ನಡೆಯಲಿದೆ. ಶೋಭಾ ಯಾತ್ರೆಯು ಸರಿಯಾಗಿ ಸಂಜೆ ೩ಗಂಟೆಯಿಂದ ಆರಂಭಗೊಂಡು ರಾತ್ರಿ ೧೦ಗಂಟೆಗೆ ಮುಗಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಗಿತು.
ವೇದಿಕೆಯಲ್ಲಿ ಡಾ. ಲೀಲಾಧರ ಅವರು ಮಾತನಾಡಿ ಎಲ್ಲಾ ಕಾರ್ಯಕ್ರಮ ಕೊಡುವ ತಂಡಗಳು ಸಂಜೆ ೬ಗಂಟೆಗೆ ಸರಿಯಾಗಿ ತಮ್ಮ ಇರುವಿಕೆಯನ್ನು ತಿಳಿಸಬೇಕು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಾವುದೇ ಸಮಸ್ಯೆಗಳಿಲ್ಲದೆ ಶಾಂತಿಯುತವಾಗಿ ನಡೆಯುವಂತೆ ಸಹಕಾರ ಕೋರಿದರು. ಸಭೆಯಲ್ಲಿ ಪದಾಧಿಕಾರಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ವೇದಿಯಲ್ಲಿ ಸಾರ್ವಜನಿಕ ದಸರಾ ಸೇವಾಟ್ರಸ್ಟ್ ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಜೊತೆ ಕಾರ್ಯದರ್ಶಿ ಸುನಿಲ್ ಕುಮಾರ್ ಕೆ. ಸಿ, ಉಪಾಧ್ಯಕ್ಷ ಬೆಳ್ಯಪ್ಪ ಗೌಡ ಬಳ್ಳಡ್ಕ, ಶರದಾಂಬಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಶ್ ಕುತ್ತಮೊಟ್ಟೆ, ಶಾರದಾಂಬಾ ಮಹಿಳಾ ಸಮಿತಿ ಗೌರವ ಅಧ್ಯಕ್ಷ ಯಶೋಧ ರಾಮಚಂದ್ರ ಉಪಸ್ಥಿತರಿದ್ದರು. ಶಾರದಾಂಬಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಶ್ ಕುತ್ತಮೊಟ್ಟೆ ಎಲ್ಲರನ್ನು ಸ್ವಾಗತಿಸಿ, ಸುನಿಲ್ ಕೇರ್ಪಳ ವಂದಿಸಿದರು. ಎಲ್ಲಾ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.