ಸುಳ್ಯದ ಸಂಭ್ರಮ ಎಲೆಕ್ಟ್ರಾನಿಕ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಸೇಲ್ಸ್ ಗಿಂತ ಗ್ರಾಹಕರಿಗೆ ಉತ್ತಮ ಸರ್ವೀಸ್ ನೀಡುತ್ತಿದೆ : ಪಿ. ಬಿ ಸುಧಾಕರ ರೈ

ಕಳೆದ 13 ವರ್ಷದಿಂದ ವಿವಿಧ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಅನುಭವ ಹೊಂದಿ ಸುಳ್ಯದ ಕಾಮತ್ ಬಿಲ್ಡಿಂಗ್ ನಲ್ಲಿ
ಗ್ರಾಹಕರಿಗೆ ಉತ್ತಮ ಸರ್ವೀಸ್ ನೀಡುತ್ತಿದ್ದ ಸಂಭ್ರಮ ಎಲೆಕ್ಟ್ರಾನಿಕ್ಸ್ ಇದೀಗ ಸುಳ್ಯದ ಸಿ. ಎ ಬ್ಯಾಂಕ್ ನೂತನ ಕಟ್ಟಡಕ್ಕೆ ಸೆ.26 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ವರ್ಕಕರ ಸಂಘದ ಅಧ್ಯಕ್ಷ ಪಿ. ಬಿ ಸುಧಾಕರ ರೈ ಅವರು ರಿಬ್ಬನ್ ಕಟ್ ಮಾಡಿ , ನಗರ ಪಂಚಾಯತ್ ಅಧ್ಯಕ್ಷರಾದ ಶಿಶಿಕಲಾ ನೀರಬಿದಿರೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಅಧ್ಯಕ್ಷ ಪಿ. ಬಿ ಸುಧಾಕರ ರೈ ಮಾತನಾಡಿ ” ಗ್ರಾಹಕರಿಗೆ ಸೇಲ್ಸ್ ಗಿಂತ ಉತ್ತಮ ಸರ್ವೀಸ್ ಸಂಭ್ರಮ ಎಲೆಕ್ಟ್ರಾನಿಕ್ಸ್ ನೀಡುತ್ತಿದೆ. ಅದರಲ್ಲೂ ಸಿ. ಎ ಬ್ಯಾಂಕ್ ಕಟ್ಟಡದಲ್ಲಿ ಇಂದು ಸ್ಥಳಾಂತರ ಗೊಂಡ ನೂತನ ಮಳಿಗೆಗೆ ಗ್ರಾಹಕರು ಬಂದು ಸಂಸ್ಥೆಗೆ ಬೆನ್ನೆಲುಬಾಗಿ ಪ್ರೋತ್ಸಾಹ ನೀಡಿ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಯಲು ನಾವು ಸಹಕಾರ ನೀಡೋಣ ಹಾಗೂ ಅವರ ಕುಟುಂಬದವರಿಗೆ ಆಯುರಾರೋಗ್ಯ ಸೌಖ್ಯ ಸಭಾಗ್ಯ ದೇವರು ಕರುಣಿಸಲಿ ಎಂದು ಶುಭಹಾರೈಸಿದರು.

ನಗರ ಪಂಚಾಯತ್ ಶಶಿಕಲಾ ನೀರ ಬಿದಿರೆ ಮಾತನಾಡಿ “ನಾವು ಈ ಸಂಸ್ಥೆಗೆ ಹಲವಾರು ವರ್ಷಗಳಿಂದ ಆತ್ಮೀಯರು. ಹಾಗೂ ಇಷ್ಟು ವರ್ಷಗಳ ಪರಿಶ್ರಮದಿಂದ ಈಗ ದೊಡ್ಡ ಎಲೆಕ್ಟ್ರಾನಿಕ್ಸ್ ಮಳಿಗೆಯನ್ನು ಮಾಡಲು ದೇವರು ಅನುಗ್ರಹಿಸಿದ್ದಾರೆ. ಇನ್ನೂ ಕೂಡಾ ಈ ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ಸುಳ್ಯ ಸಿ. ಎ ಬ್ಯಾಂಕ್ ಅಧ್ಯಕ್ಷ ವಿಕ್ರo ಅಡ್ಪಂಗಾಯ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಳಿಕ ಸಂಸ್ಥೆ ಮಾಲಕ ರೋಹಿತ್ ಅಬೀರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಿ. ಎ ಬ್ಯಾಂಕ್ ನಿರ್ದೇಶಕ, ಹಾಗೂ ಮಾಜಿ ನಗರ ಪಂ. ಅಧ್ಯಕ್ಷ ಎನ್. ಎ ರಾಮಚಂದ್ರ , ಸಂಸ್ಥೆ ಮಾಲಕರಾದ ರೋಹಿತ್ ಅಬೀರ, ಅಪ್ಪ ಧನಂಜಯ , ಅಮ್ಮ ಪುಷ್ಪಾವತಿ , ಪತ್ನಿ ಮಮತಾ ,
ಮಕ್ಕಳು ಹಾಗೂ ಅಬಿರಾ ಕುಟುಂಬಸ್ಥರು , ಸಿಬ್ಬಂದಿ ಸುಶ್ಮಿತಾ , ಬಂಧು ಮಿತ್ರರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಪತ್ರಕರ್ತ ಭಾಗೀಶ್ ಕೆ. ಟಿ ಸ್ವಾಗತಿಸಿ , ವಂದಿಸಿದರು.