ಆಲೆಟ್ಟಿ ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಜಿಲ್ಲಾ ಸಮಗ್ರ ಪ್ರಶಸ್ತಿ

0

ದಕ್ಷಿಣ ಕನ್ನಡ ಕೃಷಿ ಅಭಿವೃದ್ದಿ ಸಹಕಾರಿ ಸಂಘದ ವತಿಯಿಂದ ಕೊಡಮಾಡುವ ಸ್ಕ್ಯಾಡ್ಸ್ ಜಿಲ್ಲಾ ಸಮಗ್ರ ಪ್ರಶಸ್ತಿಗೆ ಅಲೆಟ್ಟಿ ಸಹಕಾರ ಸಂಘ ಭಾಜನವಾಗಿದ್ದು, ಸೆ.25ರಂದು ನಡೆದ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಆಲೆಟ್ಟಿ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿನಕರ ರವರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಕರುಣಾಕರ ಹಾಸ್ಪರೆ ಮತ್ತು ಸಿಬ್ಬಂದಿ ಪ್ರವೀಣ್ ಆಲೆಟ್ಟಿಜತೆಯಲ್ಲಿದ್ದರು.

ಕಳೆದ 2 ವರ್ಷದಿಂದ ಸ್ಕ್ಯಾಡ್ಸ್ ಜೊತೆಗಿನ ವ್ಯವಹಾರಕ್ಕಾಗಿ ಆಲೆಟ್ಟಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಪ್ರಥಮ ಸ್ಥಾನ ಪಡೆದುಕೊಂಡಿತು.
ಈ ವರ್ಷ ವಿಶೇಷವಾಗಿ ಸಂಸ್ಥೆಯು ಜಿಲ್ಲೆಯ ಸಮಗ್ರ ಪ್ರಶಸ್ತಿಯನ್ನು ಪಡಕೊಂಡಿದೆ.
ಸ್ಕಾಡ್ಸ್ ಅಧ್ಯಕ್ಷರು ಮತ್ತುಉಪಾಧ್ಯಕ್ಷರು, ನಿರ್ದೇಶಕರು ಉಪಸ್ಥಿತ ರಿದ್ದರು.