
ಸೆ.23 ರಂದು ಕನಕಮಜಲಿನ ಸುಣ್ಣಮೂಲೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ದಡಿಯಲ್ಲಿ ಗರ್ಭಿಣಿ ಸೀಮಂತ , ಅನ್ನಪ್ರಾಶನ ಹಾಗೂ ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮವನ್ನು ಮಾಡಲಾಯಿತು.















ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಬುಷ್ರಾ ವಹಿಸಿದ್ದರು.

ವೇದಿಕೆಯಲ್ಲಿ ಕನಕಮಜಲು ಗ್ರಾ.ಪಂ.ಸದಸ್ಯರಾದ ಇಬ್ರಾಹಿಂ ಕಾಸಿಂ ,ಆಶಾ ಕಾರ್ಯಕರ್ತೆ ಶ್ರೀಮತಿ ವೀಣಾಕುಮಾರಿ,ಕನಕಮಜಲು ಪ್ರಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾದ ಶ್ರೀಮತಿ ಪ್ರಿಯಾಂಕಾ ಇವರು ಹಾಜರಿದ್ದು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಸುಮರು 25 ಬಗೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಿಕೊಂಡು ಬಂದ ಮಕ್ಕಳ ತಾಯಿಂದಿರಿಗೆ ಸ್ತ್ರೀಶಕ್ತಿ ಸಂಘದ ವತಿಯಿಂದ ಬಹುಮಾನ ವಿತರಿಸಲಾಯ್ತು.ಸ್ತ್ರೀ ಶಕ್ತಿ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಸೌಮ್ಯಾ
ಸ್ವಾಗತ ಮಾಡಿದರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವನಜ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಶಾಲಿನಿ ಧನ್ಯವಾದ ಸಮರ್ಪಿಸಿದರು . ಅಂಗನವಾಡಿ ಸಹಾಯಕಿ ಶ್ರೀಮತಿ ಜಯಂತಿ ಸಹಕರಿಸಿದರು.
ಈ ಸಂದರ್ಭದಲ್ಲಿ ರಘುರಾಮ ಮಾಸ್ಟರ್ ಬುಡ್ಲೆಗುತ್ತು ಇವರು ಮಕ್ಕಳಿಗೆ ಕುಳಿತುಕೊಳ್ಳಲು ಚಯರ್ ಗಳನ್ನು
ಕೊಡುಗೆಯಾಗಿ ನೀಡಿದರು.ಹಾಗೂ ಹಸ್ಸನ್ ಎಚ್ ಎಲ್ ಎಸ್ ಸುಣ್ಣಮೂಲೆಯವರು ಟ್ಯೂಬ್ಲೈಟ್ ಅನ್ನು ಕೊಡುಗೆಯಾಗಿ ನೀಡಿದರು.











