ಮೇನಾಲ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

0

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆಯು ಸೆ.೨೬ರಂದು ನಡೆಯಿತು.ಸೆ.೨೫ರಂದು ಬೆಳಗ್ಗೆ ಗಣಹೋಮ ಮತ್ತು ನಾಗತಂಬಿಲ, ಗುಳಿಗತಂಬಿಲ ನಡೆಯಿತು.

ಸೆ.೨೬ರಂದು ಮಧ್ಯಾಹ್ನ ಹೂವಿನಪೂಜೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ರಾತ್ರಿ ೭ ರಿಂದ ಭಜನೆ ನಡೆಯುವುದು. ರಾತ್ರಿ ೯.೩೦ ರಿಂದ ಮಹಾಪೂಜೆ ಮತ್ತು ದೇವಿ ಸೇವೆ ಹಾಗೂ ಅನ್ನದಾನ ನಡೆಯುವುದು ಎಂದು ಕ್ಷೇತ್ರದ ಧರ್ಮದರ್ಶಿಗಳಾದ ಪದ್ಮನಾಭ ಸ್ವಾಮಿಗಳು ತಿಳಿಸಿದ್ದಾರೆ.