ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ನವರಾತ್ರಿ ಉತ್ಸವ

0

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತದಲ್ಲಿ ಸೆ.22 ರಿಂದ ನವರಾತ್ರಿ ಉತ್ಸವ ನಡೆಯುತ್ತಿದ್ದು ದಿನಂಪ್ರತಿ ನೂರಾರು ಭಕ್ತರು ಭಾಗವಹಿಸಿದ್ದಾರೆ.

ಸೆ.22 ರಂದು ಬೆಳಗ್ಗೆ ಗಣಹವನ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಸೆ.26 ರಂದು ಲಲಿತಾ ಪಂಚಮಿ, ಸಾಮೂಹಿಕ ಚಂಡಿಕಾ ಹವನ ಮತ್ತು ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಸೆ.29 ರಿಂದ ಅ.2 ರವರೆಗೆ ಬೆಳಗ್ಗೆ .8.30 ಕ್ಕೆ ವಿದ್ಯಾರಂಭ. ಅ.1 ರಂದು ರಾತ್ರಿ ವಿಶೇಷ ರಂಗಪೂಜೆ ನಡೆಯಲಿದೆ. ಅ‌.2 ರಂದು ವಿಜಯ ದಶಮಿ, ಕದಿರು ಪೂಜೆ, ಶಮಿ ಪೂಜೆ ಮಧ್ಯಾಹ್ನ ಮಹಾಪೂಜೆ, ನವಾನ್ನ ಬೋಜನ ನಡೆಯಲಿದೆ.


ಪ್ರತಿದಿನ ಮಧ್ಯಾಹ್ನ, ರಾತ್ರಿ ಮಹಾಪೂಜೆ, ವಾಹನ ಪೂಜೆ, ಅನ್ನ ಸಂತರ್ಪಣೆ ನಡೆಯುತ್ತಿದೆ.