ಅಜ್ಜಾವರ ಮಹಿಷಮರ್ದಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಚಂಡಿಕಾಯಾಗ

0

ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸೆ.22ರಿಂದ ನವರಾತ್ರಿ ಉತ್ಸವ ಆರಂಭಗೊಂಡು ಅ.01ರ ತನಕ ನಡೆಯುವುದು.


ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಗಳ ನೇತೃತ್ವದಲ್ಲಿ ನವರಾತ್ರಿ ಉತ್ಸವ ನಡೆಯುವುದು. ಪ್ರತೀ ದಿನ ವಿಶೇಷ ಪೂಜೆಗಳು ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸೆ.22ರಂದು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ಅಜ್ಜಾವರ ಇವರಿಂದ ಭಜನೆ ನಡೆಯಿತು. ಸೆ.23ರಂದು ಮೇನಾಲ ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಸೆ.24ರಂದು ಶ್ರೀಕೃಷ್ಣ ಭಜನಾ ಮಂಡಳಿ ನೆಹರುನಗರ ಇವರಿಂದ ಭಜನೆ ನಡೆಯಿತು. ಸೆ.25ರಂದು ಶ್ರೀಕೃಷ್ಣಭಜನಾ ಮಂಡಳಿ ಬಯಂಬು ಇವರಿಂದ ಭಜನೆ, ನಡೆಯಿತು. ಸೆ.26ರಂದು ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿ ಅಜ್ಜಾವರ ಇವರಿಂದ ಭಜನೆ ನಸಡೆಯಿತು. ಸೆ.27ರಂದು ಅಜ್ಜಾವರ ಭಜಕ ವೃಂದ ಹನುಮಾದ್ ಭಕ್ತಮಂಡಳಿ ಅಜ್ಜಾವರ ಇವರಿಂದ ಭಜನೆ ನಡೆಯಿತು.

ನವರಾತ್ರಿ ಉತ್ಸವದ ಪ್ರಯುಕ್ತ ಸೆ.೨೮ರಂದು ದೇವಸ್ಥಾನದಲ್ಲಿ ಚಂಡಿಕಾಯಾಗ ನಡೆಯಿತು. ಪ್ರಾತಃ ಕಾಲದಿಂದ ಯಾಗ ಆರಂಭಗೊಳ್ಳಲಿದೆ. ಯಾಗದ ಸಮಯದಲ್ಲಿ ಅಜ್ಜಾವರ ಹಾಗೂ ಮಂಡೆಕೋಲು ಗ್ರಾಮದ 200 ಕ್ಕೂ ಅಧಿಕ ಮಹಿಳೆಯರು, ಮಕ್ಕಳು ಹಾಗೂ ಮಹನೀಯರಿಂದ ಲಲಿತಾ ಸಹಸ್ರನಾಮ ಪಾರಾಯಣ ಸೇವೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ. ರಾತ್ರಿ 7 ರಿಂದ ಸಂಗೀತ ಕಾರ್ಯಕ್ರಮ ಶ್ರೀಮತಿ ನಿಖಿಲಾ ಬಯಂಬು ಮತ್ತು ಶ್ರೀಮತಿ ರೂಪಾ ಬಯಂಬು ಇವರಿಂದ ನಡೆಯಿತು.
ಸೆ.29ರಂದು ಶ್ರೀ ವಿಶ್ವಹಿಂದೂ ಭಜನಾ ಸತ್ಸಂಘದ ಮಕ್ಕಳ ತಂಡದಿಂದ ಭಜನೆ, ಸೆ.30ರಂದು ಶ್ರೀ ರಾಮ ಭಜನಾ ಮಂದಿರ ಸುಳ್ಯ ಇವರಿಂದ ಭಜನೆ ನಡೆಯುವುದು.

ಅ.01ರಂದು ಬುಧವಾರ ಬೆಳಗ್ಗೆಯಿಂದ ಆಯುಧ ಪೂಜೆ ನಡೆಯುವುದು. ಮಧ್ಯಾಹ್ನ ಶ್ರೀ ದೇವಿಯ ಪ್ರಸಾದ ಸೀರೆಗಳ ಏಲಂ ನಡೆಯಲಿದೆ. ಸಂಜೆ ಯಕ್ಷಗಾನ ತಾಳಮದ್ದಳೆ ಸುಬ್ರಾಯ ಸಂಪಾಜೆ ಮಾಜಿ ಆಕಾಶವಾಣಿ ಕಲಾವಿದರು ಮಡಿಕೇರಿ ಇವರ ಸಂಯೋಜನೆಯಲ್ಲಿ. ರಾತ್ರಿ ಶ್ರೀ ದೇವಿಗೆ ಸಾಮೂಹಿಕ ದುರ್ಗಾಪೂಜೆ ಮತ್ತು ಕಾರ್ತಿಕ ಪೂಜೆ ನಡೆಯುವುದು.