ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾ ಕಚೇರಿಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಇಂದು ನೆರವೇರಿತು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು ದೀಪ ಬೆಳಗಿಸಿ ಆಯುಧಪೂಜೆಯ ಔಚಿತ್ಯದ ಬಗ್ಗೆ ಮಾತನಾಡಿದರು.















ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ, ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಕೇಂದ್ರ ಕಚೇರಿಯ ಯೋಜನಾ ನಿರ್ದೇಶಕ ಪದ್ಮಯ್ಯ ಸಿ.ಎಚ್., ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಶಿವಪ್ರಸಾದ್ ಮಾದನಮನೆ, ಭವಾನಿಶಂಕರ ಅಡ್ತಲೆ, ಸತೀಶ್ ಟಿ.ಎನ್, ನಾರಾಯಣ ಕೇಕಡ್ಕ, ಬೂಡು ರಾಧಾಕೃಷ್ಣ, ಸುನಿಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.










