ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಅ.1 ರಂದು ವಳಲಂಬೆಯಲ್ಲಿ ಪೂರ್ವಭಾವಿ ಸಭೆ

0

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಅ.1 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆಯಲಿದೆ.

ಪಂಜ ಕಂದಾಯ ಹೋಬಳಿಯ ಕೆಲವು ಗ್ರಾಮಗಳು, ಮಡಪ್ಪಾಡಿ, ನೆಲ್ಲೂರು ಕಮಾಜೆ, ಅಮರ ಮೂಡೂರು, ಕಲ್ಮಡ್ಕ ಕಳಂಜ, ಬಾಳಿಲ, ಮುರುಳ್ಯ ಗ್ರಾಮಗಳನ್ನೊಳಗೊಂಡ ಸಾಹಿತ್ಯಾಸಕ್ತರನ್ನೊಳಗೊಂಡು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸುವಂತೆ ಕೋರಲಾಗಿದೆ.